ಪ್ರಮುಖ ಸುದ್ದಿ

ಉದ್ಯೋಗ, ಸ್ವಾವಲಂಬಿ ಬದುಕಿಗೆ ಪೂರಕ ಅವಕಾಶವೇ ಜಿಟಿಟಿಸಿ – ಡಾ.ಸುಧಾರಾಣಿ

ಕೌಶಲ್ಯದ ಜತೆಗೆ ನೈತಿಕ ಮೌಲ್ಯ ಅಳವಡಿಸಿಕೊಳ್ಳಿ - ಡಾ.ಸುಧಾರಾಣಿ

ವಿದ್ಯಾರ್ಥಿಗಳಿಗೆ ಕೌಶಲ್ಯದ ಜೊತೆಗೆ ನೈತಿಕ ಮೌಲ್ಯಗಳು ನೀಡುವುದೆ ಜಿಟಿಟಿಸಿ – ಡಾಃ ಸುಧಾರಾಣಿ

ಕಲಬುರಗಿಃ ಯುವ ಸಮುದಾಯಕ್ಕೆ ಉದ್ಯೋಗ ಮತ್ತು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ಪೂರಕ ಅವಕಾಶ ಕಲ್ಪಿಸುವುದೇ ಜಿಟಿಟಿಸಿ ಕಾಲೇಜಿನ ಉದ್ದೇಶವೆಂದು ಜಿಟಿಟಿಸಿ ಕಾಲೇಜು ಪ್ರಾಂಶುಪಾಲೆ ಡಾ.ಸುಧಾರಾಣಿ ತಿಳಿಸಿದರು.

Oplus_131072

ನಗರದ ಸಂತ್ರಸವಾಡಿಯ ದರ್ಶನಾಪುರ ಲೇಔಟ್ ನಲ್ಲಿರುವ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ 2024 ನೇಯ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಸ್ವಾಗತ ಸಮಾರಂಭ ಹಾಗೂ ಪಾಲಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು,

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ಇದ್ದಾಗ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ. ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಕೌಶಲ್ಯ ಮತ್ತು  ನೈತಿಕ ಶಿಕ್ಷಣ ಹಾಗೂ ಮೌಲ್ಯಗಳನ್ನು ಬಿತ್ತುವ ಕೆಲಸ ನಮ್ಮ ಸಂಸ್ಥೆ ಮಾಡಲಿದೆ ಎಂದರು.

ಜಿಟಿಟಿಸಿ ಕೇಂದ್ರದ ಮುಖ್ಯಸ್ಥ ಟಿ,ಎನ್.ಜಯರಾಜ್ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ ಗುರಿ ತಲುಪಬೇಕು, ಅಲ್ಲದೆ ಹಾರ್ಡ್ ವರ್ಕ್ ಮತ್ತು ಸ್ಮಾರ್ಟ್ ವರ್ಕ್ ಜೊತೆಗೆ ಪ್ರಾಮಾಣಿಕತೆ, ಆತ್ಮಸ್ಥೈರ್ಯ ಈ ನಾಲ್ಕು ಅಂಶಗಳನ್ನು  ಜೀವನದಲ್ಲಿರೂಢಿಸಿಕೊಳ್ಳಬೇಕು ಯಾವತ್ತು ಮರೆಯಕೂಡದು. ಜೊತೆಗೆ ತಂದೆ ತಾಯಿ ಹಾಗೂ ಗುರು ಹಿರಿಯರು ಸೇರಿದಂತೆ ಶಿಕ್ಷಕರನ್ನು ಗೌರವಿಸಬೇಕು,ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು,

ಇದೇ ಕಾಲೇಜಿನ ಇನ್ನೋರ್ವ ಅತಿಥಿಗಳಾದ ಗುರುರಾಜ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಪಡೆದುಕೊಂಡ ಶೈಕ್ಷಣಿಕ ಜ್ಞಾನವನ್ನು ಮಾತ್ರವಲ್ಲದೆ, ಮೃದು ಕೌಶಲ್ಯಗಳು ತಾಂತ್ರಿಕ ಪರಿಣಿತಿ ಮತ್ತು ಬದಲಾಗುತ್ತಿರುವ ಸಂದರ್ಭದಲ್ಲಿ ಹೊಂದಿಕೊಳ್ಳುವ ಸಾಮರ್ಥವನ್ನು ಒಳಗೊಂಡಿರುವ ವೈದ್ಯಮಯ ಕೌಶಲ್ಯ ಜೊತೆಗೆ ಅಭ್ಯರ್ಥಿಗಳನ್ನು ಹಲವಾರು ಕಂಪನಿಗಳು ಹುಡುಕುತ್ತವೆ ಎಂಬುದನ್ನು ನೆನಪಿಸಿಕೊಟ್ಟರು.

ಸಮಾರಂಭದ ವೇದಿಕೆಯ ಮೇಲೆ, ಸಿಬ್ಬಂದಿಗಳಾದ ಸುನಿಲ್,ಮಾನಪ್ಪ, ಬಸವರಾಜ್ ತೇಗನೂರ,ಹಾಗೂ ಇತರರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು. ಉಪನ್ಯಾಸಕ ಅರುಣ್,ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button