ಪ್ರಮುಖ ಸುದ್ದಿ
PM ಕಿಸಾನ್ ಹಣ ಶೇ. 30ರಷ್ಟು ಹೆಚ್ಚಿಸುವ ಸಾಧ್ಯತೆ..!

ಮುಂದಿನ ವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಇರುವ ನಿರೀಕ್ಷೆಗಳಲ್ಲಿ PM ಕಿಸಾನ್ ಯೋಜನೆ ಹಣ ಹೆಚ್ಚಳವೂ ಇದೆ.
ವರದಿಗಳ ಪ್ರಕಾರ PM ಕಿಸಾನ್ ಯೋಜನೆಗೆ ಬಜೆಟ್‌ನಲ್ಲಿ ನೀಡಲಾಗುವ ಹಣದಲ್ಲಿ ಶೇ.30ರಷ್ಟು ಹೆಚ್ಚಳ ಆಗಬಹುದು ಎನ್ನಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಯುವಜನರು, ಮಹಿಳೆಯರು, ರೈತರು & ಗ್ರಾಮೀಣಭಾಗ ಈ ನಾಲ್ಕು ಅಂಶಗಳಿಗೆ ಹೆಚ್ಚಿನ ಒತ್ತು ಕೊಡಬಹುದು.
ಹೀಗಾಗಿ, PM ಕಿಸಾನ್ ಯೋಜನೆಗೆ ಹಣ ಹಂಚಿಕೆ ಹೆಚ್ಚಿಸುವ ಸಾಧ್ಯತೆ ಗಟ್ಟಿಯಾಗಿದೆ. ಸದ್ಯ, PM ಕಿಸಾನ್ ಯೋಜನೆಯಲ್ಲಿ ಒಂದು ವರ್ಷದಲ್ಲಿ 6,000 ರೂ ಹಣವನ್ನು ರೈತರಿಗೆ ನೀಡಲಾಗುತ್ತಿದೆ.