Homeಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್ ಶಿಪ್; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

(Aspire Scholarship) ಬಿ.ಟೆಕ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ 2024- 25 ನೇ ಸಾಲಿನ ಆಸ್ಪೈರ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ. ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಆಸ್ಪೈರ್ ಸ್ಕಾಲರ್ಶಿಪ್ ಪ್ರೋಗ್ರಾಂ 2024-25, ಡಾ. ಅಜಯ್ ಚೌಧರಿ ಮತ್ತು ಅವರ ಕುಟುಂಬದಿಂದ ಸ್ಥಾಪಿಸಲಾದ ಲಾಭರಹಿತ ಸಂಸ್ಥೆಯಾಗಿರುವ ಸ್ವಯಂ ಚಾರಿಟೇಬಲ್ ಟ್ರಸ್ಟ್ನ ಸಿಎಸ್ಆರ್ ಉಪಕ್ರಮವಾಗಿದೆ. ಈ ವಿದ್ಯಾರ್ಥಿವೇತನವು ಭಾರತದಾದ್ಯಂತ 11 ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಬಿ.ಟೆಕ್. ಕೋರ್ಸ್ಗಳನ್ನು ಅಭ್ಯಾಸ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ನೀಡುವ ಗುರಿಯನ್ನು ಹೊಂದಿದೆ.

ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
* ನಿರ್ದಿಷ್ಟಪಡಿಸಿದ ಸಂಸ್ಥೆಗಳಲ್ಲಿ ಬಿ.ಟೆಕ್. ಮೊದಲ ವರ್ಷದ ಕೋರ್ಸ್ಗಳಿಗೆ ಸೇರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

* Indian Institute of Technology Kharagpur (IIT-Kharagpur)
* Indian Institute of Technology Hyderabad (IIT-Hyderabad)
* Indian Institute of Technology Patna (IIT-Patna)
* Indian Institute of Technology Delhi (IIT-Delhi)
* Indian Institute of Technology Bombay (IIT-Bombay)
* Indian Institute of Technology Goa (IIT-Goa)
* Indian Institute of Information Technology, Design & Manufacturing (IIITDM) Jabalpur
* Indraprastha Institute of Information Technology Delhi (IIIT-Delhi)
* Dr Shyama Prasad Mukherjee International Institute of Information Technology Naya Raipur (IIIT NR)
* Jabalpur Engineering College
* National Institute of Advanced Manufacturing Technology (NIAMT, Ranchi)

* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ರೂ.6 ಲಕ್ಷಗಳನ್ನು ಮೀರಬಾರದು.

ಎಷ್ಟು ಸ್ಕಾಲರ್ ಶಿಪ್ ಲಭ್ಯ?;
ಬೋಧನಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಆಹಾರ ಮತ್ತು ಸಂಬಂಧಿತ ವೆಚ್ಚಗಳಂತಹ ಶೈಕ್ಷಣಿಕ ಖರ್ಚುಗಳನ್ನು ಸರಿದೂಗಿಸಲು ನೈಜ ಶುಲ್ಕ ರಚನೆಯ ಆಧಾರದ ಮೇಲೆ ವಿದ್ಯಾರ್ಥಿವೇತನ.

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/ASPI2 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
20-09-2024

Related Articles

Leave a Reply

Your email address will not be published. Required fields are marked *

Back to top button