ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ, ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಜೀವ..!
![](https://vinayavani.com/wp-content/uploads/2024/09/download-14-780x470.jpeg)
ಬೆಂಗಳೂರು : ಬಸ್ ಚಲಿಸುತ್ತಿರುವಾಗಲೇ ಸರ್ಕಾರಿ ಬಸ್ ಚಾಲಕನಿಗೆ ಏಕಾಏಕಿ ಎದೆನೋವು( Heart attack) ಕಾಣಿಸಿಕೊಂಡ ಘಟನೆ ನಡೆದಿದ್ದು ಪೊಲೀಸರ ಸಮಯ ಪ್ರಜ್ಞೆ ಬಸ್‌ನಲ್ಲಿದ್ದ ಅಷ್ಟೊಂದು ಪ್ರಯಾಣಿಕರ ಜೀವ ಉಳಿಸಿದೆ.
BMTC ಬಸ್ ಡ್ರೈವರ್ ವಿರೇಶ್ ಎಂದಿನಂತೆ KA51AJ6905 ನಂಬರಿನ ಬಸ್ ಚಲಾಯಿಸಿಕೊಂಡು ಹೊರಟಿದ್ದಾನೆ. ಬಸ್‌ನಲ್ಲಿ ಸುಮಾರು 45 ಜನ ಪ್ರಯಾಣಿಕರಿದ್ದರು. ಗುರುವಾರ ಮಧ್ಯಾಹ್ನ ಶಾಂತಿನಗರದ ಡಬಲ್ ರೋಡ್ ಬಳಿ ಬಸ್ ರನ್ನಿಂಗ್‌ನಲ್ಲಿದ್ದ ವೇಳೆ ಏಕಾಏಕಿ ಚಾಲಕ ವಿರೇಶ್‌ಗೆ ಎದೆನೋವು ಕಾಣಿಸಿಕೊಂಡಿದೆ. ಇದರಿಂದ ವೇಗವಾಗಿ ಓಡುತ್ತಿದ್ದ ಬಸ್ ನಿಧಾನವಾಗ ತೊಡಗಿದೆ. ಅನುಮಾನಗೊಂಡು ದೂರದಿಂದಲೇ ಗಮನಿಸಿದ್ದ ಹಲಸೂರು ಟ್ರಾಫಿಕ್ ಎಎಸ್‌ಐ ಆರ್ ರಘುಕುಮಾರ್ ಬಸ್ ಬಳಿ ಓಡಿ ಬಂದಿದ್ದಾರೆ. ಬಂದು ನೋಡಿದಾಗ ಎದೆಗೆ ಕೈ ಹಿಡಿದು ಬಸ್ ಚಾಲಕ ಒಂದು ಕಡೆಗೆ ವಾಲಿದ್ದಾನೆ.
ಹಾರ್ಟ್ ಅಟ್ಯಾಕ್ ಆಗಿರುವುದನ್ನ ಕನ್ಫರ್ಮ್ ಮಾಡಿದ ಟ್ರಾಫಿಕ್ ಎಎಸ್‌ಐ ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ ಚಾಲಕನನ್ನು ಕೆಳಗೆ ಇಳಿಸಿ ಆಂಬುಲೆನ್ಸ್ ಗೂ ಕಾಯದೆ ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಬಸ್ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಚಾಲಕ ವೀರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಪೊಲೀಸರ ಸಮಯಪ್ರಜ್ಞೆ 45 ಜನರ ಪ್ರಾಣವನ್ನೂ ಉಳಿಸಿದೆ.