
ಜನ್ಮಾಷ್ಟಮಿ
ಹಬ್ಬಿತಬ್ಬಿದ ಕಗ್ಗತ್ತಲು ಗುಡುಗು ಮಳೆಯು ಸುತ್ತಲು | ನಟ್ಟಿರುಳ ಸೀಳಿ ಬೆಳಕು ಬಂದಿತು ಬಂಧಿಖಾನೆಗೆ || 1 |
ರಭಸದ ಹರಿವು ದಾರಿ ಕೊಟ್ಟಿತು ಒಳಿತಿಗೆ | ಮಥುರೆ ಅದುರಿತು ಗೋ ಕುಲದಿ ಗಂಧವು ಹರಡಿತು ॥ 2 ॥
ಬವಣೆ ಬೇಗೆಯ ನೀಗಲು ಕೊಳಲ ಇಂಪಿನ ಸಿಂಚನ | ಜೀವಜಾಲದ ಸೌಖ್ಯಕೆ ಗಿರಿ ಎತ್ತಿದನು ಗೋವರ್ಧನ || 3 |
ಗೋಪಿಕೆಯರ ಸರಸ ರಾಧೆಯ ನಿಷ್ಕಲ್ಮಶದ ಪ್ರೇಮವು । ದಾರಿದ್ರವ ದೂರ ಮಾಡಿ ಸಖ್ಯದ ಹಿರಿಮೆಯ ಮೆರೆಯಿತು ॥ 4 ॥
ಹೊಲ್ಲಕೆಲಸದ ನಾಶಕೆ ಸು ದರುಶನ ಗಾಲಿಯು ತಿರುಗಿತು | ಅಧರ್ಮವಳಿಸಿ ಸುಧರ್ಮಕಾಗಿ ಪಾಂಚಜನ್ಯವು ಮೊಳಗಿತು ॥ 5 ॥
ದರ್ಪ ದಬ್ಬಾಳಿಕೆ ಅಳಿಯಲು ಭರವಸೆಯ ಅವತಾರವು । ಸಜ್ಜನ ಸಭ್ಯತೆಯ ಕಾಯಲು ಬಂದೇ ಬರುವುದು ದೈವವು ॥ 6 ॥
– ಡಿ.ಎನ್.ಅಕ್ಕಿ.
08.08.2025.