ಸೆಪ್ಟಂಬರ್ ಕ್ರಾಂತಿ ಎಂದಿದ್ದ ರಾಜಣ್ಣ ಬಾಳಲ್ಲಿ ದಿಗ್ಭ್ರಾಂತಿ
ಕಾಂಗ್ರೆಸ್ ವಿರುದ್ಧವೇ ರಾಜಣ್ಣ ಹೇಳಿಕೆಯೇ ತಲೆದಂಡಕ್ಕೆ ಕಾರಣವಾ.?

ಸೆಪ್ಟಂಬರ್ ಕ್ರಾಂತಿ ಎಂದಿದ್ದ ರಾಜಣ್ಣ ಬಾಳಲ್ಲಿ ದಿಗ್ಭ್ರಾಂತಿ
ವಿವಿ ಡೆಸ್ಕ್ಃ ಸೆಪ್ಟೆಂಬರ್ ಕ್ರಾಂತಿ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷದ ಒಳ ಬೇಗುದಿ ಹೊರ ಹಾಕಿದ್ದ ಪ್ರಸ್ತುತ ಸಹಕಾರಿ ಸಚಿವರಾಗಿದ್ದ ಕೆ.ಎನ್. ರಾಜಣ್ಣ ಅಲ್ಲಿಂದ ಒಂದೊಂದು ಹೇಳಿಕೆಯೂ ಅರ್ಥಪೂರ್ಣ ಸತ್ಯದ ಗಟ್ಟಿ ಧ್ವನಿಯಾಗಿತ್ತು.
ಹೀಗಾಗಿ ಕೈ ಹೈಕಮಾಂಡ್ ಗೆ ರಾಜಣ್ಣ ವಿರುದ್ಧ ಹಲವರು ದೂರಿದ್ದರು.
ಸಿಎಂ ಸಿದ್ರಾಮಯ್ಯರ ಆಪ್ತರಾಗಿ ಗುರುತಿಸಿಕೊಂಡಿದ್ದ ರಾಜಣ್ಣ ತಮ್ಮ ವಿರುದ್ಧ ಹನಿಟ್ರ್ಯಾಪ್ ನಡೆದಿರುವ ಬಗ್ಗೆಯೂ ಹೇಳಿಕೆ ನೀಡಿ ಅಧಿವೇಶನ ವೇಳೆ ಪಕ್ಷಕ್ಕೆ ಮುಜಗರ ತಂದಿದ್ದರು.
ಅಲ್ಲದೆ ಇದೀಗ ರಾಹುಲ್ ಗಾಂಧಿ ಮತಗಳ್ಳತನ ಕುರಿತು ಮಾತನಾಡಿದ ಅವರು, ಮತಪಟ್ಟಿ ಸಿದ್ಧ ಪಡಿಸಿರುವದು ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರವಿದ್ದಾಗ, ಆಗ ಏನು ಪರಿಶೀಲಿಸದೆ ಯಾವುದೇ ಕ್ರಮ ತೆಗದುಕೊಳ್ಳದೆ ಇದೀಗ ಮಾತಾಡಿದರೆ ಹೇಗೆ ಎಂದು ತಮ್ಮದೇ ಪಕ್ಷದ ರಾಜ್ಯ ಹಾಗೂ ಹೈಕಮಾಂಡ್ ವಿರುದ್ಧ ಹೇಳಿಕೆ ನೀಡಿರುವದೇ ಅವರಿಗೆ ಮುಳುವಾಯಿತು ಎನ್ನಬಹುದು.
ಸೆಪ್ಟೆಂಬರ್ ಕ್ರಾಂತಿ ಎಂದಿದ್ದ ರಾಜಣ್ಣ ಬಾಳಲ್ಲಿ ಇದೀಗ ಹೈ ಕಮಾಂಡ್ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವ ಮೂಲಕ ದಿಗ್ಭ್ರಾಂತಿ ಮೂಡಿಸಿದೆ. ರಾಜಣ್ಣರ ಕ್ರಾಂತಿ ಹೇಳಿಕೆಗಳೇ ಅವರ ತಲೆದಂಡಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜಣ್ಣನವರ ಮುಂದಿನ ನಡೆ ಏನು ಎಂಬುದು ಕಾಯ್ದು ನೋಡಬೇಕಿದೆ.