ಪ್ರಮುಖ ಸುದ್ದಿ
ಕಲಬುರಗಿ: ವಿದ್ಯಾರ್ಥಿಯ ಜೀವ ನುಂಗಿತು ಮೊಬೈಲ್ ಮಾತು!
ಮೊಬೈಲ್ ನಲ್ಲಿ ಮಾತಾಡುವ ಎಚ್ಚರ ಎಚ್ಚರ!
ಕಲಬುರಗಿ: ಸೇಡಂ ಪಟ್ಟಣದ ರೈಲು ನಿಲ್ದಾಣ ಬಳಿ ಮೈಮರೆತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕನೊಬ್ಬ ರೈಲು ಹರಿದು ಸಾವಿಗೀಡಾದ ಘಟನೆ ನಡೆದಿದೆ. ಸೇಡಂ ತಾಲೂಕಿನ ಗಾಡಾದಾನ್ ತಾಂಡಾದ ನಿವಾಸಿ ಅನಿಲ್ ಸೇಡಂ ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದ. ಅಂಬೇಡ್ಕರ್ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿ ರೈಲು ಹಳಿ ಬಳಿಗೆ ಅದ್ಯಾಕೆ ಹೋಗಿದ್ದನೋ ಗೊತ್ತಿಲ್ಲ. ಹೆಡ್ ಫೋನ್ ಹಾಕಿಕೊಂಡು ಮೊಬೈಲ್ ನಲ್ಲಿ ಮಾತನಾಡುವ ಭರದಲ್ಲಿ ಮೈಮರೆತು ರೈಲು ಹಳಿ ಮೇಲೆ ಓಡಾಡುತ್ತಿದ್ದನಂತೆ. ಆದರೆ, ಅದೇ ಸಮಯಕ್ಕೆ ಬಂದ ರೈಲು ಯುವಕನನ್ನು ಬಲಿ ಪಡೆದಿದೆ. ಈ ಬಗ್ಗೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




