ಪ್ರಮುಖ ಸುದ್ದಿ
ಕೊರೊನಾ ಕುರಿತು ನಾಳೆ ಮತ್ತೆ ಮೋದಿ ಸಂದೇಶ
ಕೊರೊನಾ ಕುರಿತು ನಾಳೆ ಮತ್ತೆ ಮೋದಿ ಸಂದೇಶ
ವಿವಿಡೆಸ್ಕ್ಃ ಕೊರೊನಾ ವೈರಸ್ ಕುರಿತು ಪ್ರಧಾನಿ ಮೋದಿಜಿಯವರು ದೇಶದ ಜನತೆಗೆ ನಾಳೆ ಬೆಳಗ್ಗೆ 9 ಗಂಟೆಗೆ ಮತ್ತೆ ಸಂದೇಶ ನೀಡಲಿದ್ದಾರೆ.
ಈ ಕುರಿತು ಮೋದಿಜಿ ಟ್ವಿಟ್ ಮೂಲಕ ಮಾಹಿತಿ ನೀಡಿದ್ದು, ನಾಳೆ ವಿಡಿಯೋ ಸಂದೇಶ ಕಳುಹಿಸಲಿದ್ದಾರಂತೆ. ಹೀಗಾಗಿ ದೇಶದ ಜನತೆಯಲ್ಲಿ ಕುತುಹಲ ಮೂಡಿದೆ.
ಕೊರಿನಾ ಮಹಾಮಾರಿ ಇಲ್ಲಿಗೆ ಕಡಿಮೆಯಾಗುತ್ತಾ ಅಥವಾ ಮತ್ತೇನಾದ್ರೂ ಹೊಸ ನಿಯಮ ಪಾಲನೆಗೆ ಸೂಚಿಸಲಿದ್ದಾರಾ ಅಥವಾ ಲಾಕ್ ಡೌನ್ ಇನ್ನು ಕೆಲ ದಿನ ಮುಂದುವರೆಸಲಿದ್ದಾರಾ..? ಎಂಬ ಚರ್ಚೆ ಶುರುವಾಗಿದೆ ಎನ್ನಬಹುದು. ಯಾವುದಕ್ಕೂ ಮೋದಿಜಿಯ ಸಂದೇಶಕ್ಕಾಗಿ ನಾಳೆ ಬೆಳಗ್ಗೆ 9 ಗಂಟೆವರೆಗೂ ಕಾಯಲೇಬೇಕಿದೆ.