ಹಣ, ಅಂತಸ್ತಿಗಿಂತ ಪ್ರೀತಿ ಶಾಂತಿ ಸಮಾಧಾನ ಮುಖ್ಯ-ವಿನ್ಸೆಂಟ್ ಪಿರೇರಾ
ಸೈಂಟ್ ಪೀಟರ್ ಶಾಲೆಯಲ್ಲಿ ಶಾಂತಿ ಸಂದೇಶ ಸಮಾರಾಂಭ
ಶಹಾಪುರಃ ಮನುಷ್ಯ ಜನ್ಮ ಪಾವನವಾದದು ಜನ್ಮ ಇರುವತನಕ ನಾವುಗಳು ಮಾಡಿದ ಪುಣ್ಯ ಪಾಪಗಳಿಗೆ ಅಂತಿಮ ಹಂತದವರೆಗೂ ನಮ್ಮನ್ನು ತಂದು ನಿಲ್ಲಿಸಲಿವೆ. ಮನುಷ್ಯನಾದ ಮೇಲೆ ಸರ್ವರೊಂದಿಗೆ ಪ್ರೀತಿ, ವಿಶ್ವಾಸ ಶಾಂತಿ ಸಮಧಾನದಿಂದ ಬದುಕು ನಡೆಸುವುದು ಬಹು ಮುಖ್ಯವಾಗಿದೆ ಎಂದು ಗುಲ್ಬರ್ಗಾ ಡಯಾಸಿಸ್ ಎಜ್ಯುಕೇಷನ್ ಕಾರ್ಯದರ್ಶಿ ವಿನ್ಸೆಂಟ್ ಪಿರೇರಾ ಹೇಳಿದರು.
ನಗರದ ಸೈಂಟ್ ಪೀಟರ್ ಶಾಲೆಯಲ್ಲಿ ನಡೆದ ಶಾಂತಿ ಸಂದೇಶ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾನವ ಎಷ್ಟೇ ಹಣ ಸಂಪತ್ತು ಆಸ್ತಿ ಗಳಿಸಿದರು ಸಮಧಾನ ಶಾಂತಿ ದೊರೆಯದಿದ್ದಲ್ಲಿ ಎಲ್ಲವೂ ವ್ಯರ್ಥವಾದಂತೆ. ಕಾರಣ ಪ್ರತಿಯೊಬ್ಬರು ಪರಸ್ಪರೊಡನೆ ಪ್ರೀತಿಯಿಂದ ವರ್ತಿಸಬೇಕು. ಉತ್ತಮ ಬಾಂಧವ್ಯ ಹೊಂದಿರಬೇಕು. ಪ್ರತಿಯೊಬ್ಬರ ಭಾವನೆಗಳನ್ನು ಅರಿತು ಬದುಕಬೇಕು.
ಜಾತಿ ಧರ್ಮಗಳಲ್ಲಿ ಬೇಧಬಾವ ಮಾಡದೆ, ಮಾನವರೆಲ್ಲರೂ ಒಂದೇ ಎಂಬ ಭಾವನೆ ಬರಬೇಕು. ಎಲ್ಲಾ ಧರ್ಮಗಳ ತಿರುಳು ಒಂದೆ. ಆಯಾ ಧರ್ಮಗಳ ಆಚರಣೆ ವಿಚಾರ ಮಾತ್ರ ಬದಲಾಗಿರಬಹುದು. ಆದರೆ ಸರ್ವ ಧರ್ಮಗಳು ಶಾಂತಿ ಸಂದೇಶವನ್ನು ಸಾರಿವೆ.
ಪ್ರಪಂಚದಲ್ಲಿ ಜೀವಿಸಲು ಬುದ್ಧಿವಂತಿಕೆ, ಹಣ ಸಂಪತ್ತು ಬೇಕಿಲ್ಲ. ಶಾಂತಿ ಪ್ರೀತಿ ಸಹಬಾಳ್ವೆ ಹೊಂದಿದ್ದರೆ ಸುಗಮ ಸುಮಧುರ ಜೀವನ ಸಾಗಿಸಬಹುದು.
ಅಲ್ಲದೆ ಸೈಂಟ್ ಪೀಟರ್ ಶಾಲೆ ತಮ್ಮ ಮಕ್ಕಳನ್ನು ಕೇವಲ ಶೈಕ್ಷಣಿಕವಾಗಿ ಬೆಳೆಸುತ್ತಿಲ್ಲ. ಸಾಂಸ್ಕøತಿಕವಾಗಿ ದೈಹಿಕ ಸದೃಢತೆ ಗಮನದಲ್ಲಿಟ್ಟು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಸೂಸುವ ಮೂಲಕ ಎಲ್ಲಾ ರಂಗಗಳಲ್ಲೂ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ತಮ್ಮೆಲ್ಲರ ಸಹಕಾರ ಶಿಕ್ಷಕ ವೃಂದದ ಶ್ರಮವೇ ಕಾರಣ ಎಂದರು.
ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಮೇಶ ನಾಯಿಕ, ಫಾದರ್ ಫೆಡ್ರಿಕ್ ಡಿಸೋಜ, ಬಿಆರ್‍ಸಿ ಜಗಧೀಶ ಗೋಟ್ಲಾ, ಸುರೇಶ ರಡ್ಡಿ, ಈರಯ್ಯ ಹಿರೇಮಠ, ಅಬಕಾರಿ ಇಲಾಖೆ ಅಧಿಕಾರಿ ಭಾರತಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಸಿ.ಮಿಲಾಗ್ರಿನ್ ಅಧ್ಯಕ್ಷತೆವಹಿಸಿದ್ದರು. ಶಿಕ್ಷಕಿ ಸುಪ್ರಿಯಾ ನಿರೂಪಿಸಿ ವಂದಿಸಿದರು. ಶಿಕ್ಷಕಿಯರಾದ ಸೌಮ್ಯ, ರೇಣುಕಾ, ವನೀತಾ, ಸುಜಾತ, ರೋನಿಕಾ, ವೆಲ್ವೀಟಾ, ಮರಿಯಾ, ದೀಪಾ ಸೇರಿದಂತೆ ಶಿಕ್ಷಕ ವೆಂಕಟೇಶ ಹಾಗೂ ಸಿಬ್ಬಂದಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಟ್ಟರು.