ಪ್ರಮುಖ ಸುದ್ದಿ
ಬ್ಲಾಕ್ ಮೇಲ್ ಪೊಲೀಸ್ ಪೇದೆಯ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಗೆ ಮುತ್ತಿಗೆ
ಕಲಬುರಗಿ: ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಹೋಗಿದ್ದನ್ನೇ ಅಸ್ತ್ರವಾಗಿಸಿಕೊಂಡ ಮಲ್ಲು ಬಾಸಗಿ ಎಂಬ ಪೇದೆಯೋರ್ವ ಜೇವರಗಿ ಪಟ್ಟಣದ ರಮೇಶ ತಳವಾರ್ ಎಂಬ ಯುವಕನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ. ಪರಿಣಾಮ ಮನನೊಂದ ರಮೇಶ ನೇಣಿಗೆ ಶರಣಾಗಿದ್ದಾನೆಂಬುದಿ ಮೃತನ ಸಂಬಂಧಿಕರ ಆರೋಪ. ಹೀಗಾಗಿ, ಮೃತನ ಸಂಬಂಧಿಕರು ಜೇವರ್ಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮೇಶ ತಳವಾರ್ ಆತ್ಮಹತ್ಯೆಗೆ ಕಾರಣ ಆಗಿರುವ ಪೇದೆ ಮಲ್ಲು ಬಾಸಗಿಯನ್ನು ಕೂಡಲೇ ಬಂಧಿಸಬೇಕು. ಅಂತೆಯೇ ಅಮಾನತ್ತುಗೊಳಿಸಿ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಮೃತನ ಸಂಭಂಧಿಕರಿಗೆ ನೂರಾರು ಜನ ಸ್ಥಳೀಯರು ಸಾಥ್ ನೀಡಿದ್ದಾರೆ. ಬ್ಲಾಕ್ ಮೇಲ್ ಪೇದೆ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಠಾಣೆಗೆ ಮುತ್ತಿಗೆ ಹಾಕಿದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.