sky pappies ಅರ್ಥಾತ್ ‘ಆಕಾಶ ನಾಯಿಮರಿಗಳಿವೆ’ ಗೊತ್ತಾ?
-ವಿನಯ ಮುದನೂರ್
ನಾಯಿಮರಿಗಳನ್ನು ಸಹಜವಾಗಿಯೇ ಎಲ್ಲರೂ ನೋಡಿರುತ್ತೇವೆ. ಕೆಲವು ನಾಯಿಗಳನ್ನು ಕಂಡು ಓಡಿರುತ್ತೇವೆ. ಇನ್ನು ಕೆಲವು ಮುದ್ದು ನಾಯಿಮರಿಗಳ ಜೊತೆ ಆಟವಾಡಿರುತ್ತೇವೆ. ಆದರೆ, ಎಂಥವರಿಗೂ ಸಹ ನಾಯಿಗಳ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಮನುಷ್ಯನೊಂದಿಗೇ ಬದುಕುವ ಪ್ರಾಣಿ ನಾಯಿ. ಅದರಲ್ಲೂ ನಿಯತ್ತಿನ ಪ್ರಾಣಿ ಎಂದೇ ಕರೆಯಲ್ಪಡುವ ನಾಯಿ ಎಲ್ಲರಿಗೂ ಇಷ್ಟ. ಈಗ ನಾಯಿಗಳ ಮಾತೇಕೆ ಅಂದರೆ ಅಮೇರಿಕಾದ ಕಾಡುಗಳಲ್ಲಿ ಸ್ಕೈ ಪಪ್ಪೀಸ್ ಅರ್ಥಾತ್ ‘ಆಕಾಶ ನಾಯಿಮರಿಗಳು’ ಪತ್ತೆ ಆಗಿವೆ ಅಂತೆ.
ಹೌದು, ದಕ್ಷಿಣ ಮತ್ತು ಮಧ್ಯ ಅಮೆರಿಕಾದ ಕಾಡುಗಳಲ್ಲಿ ಆಕಾಶ ನಾಯಿಮರಿಗಳು ಪತ್ತೆ ಆಗಿವೆ. ಈ ನಾಯಿಗಳು ಬಾವುಲಿಗಳಂತೆ ವೇಗವಾಗಿ ಹಾರಬಲ್ಲವು. ಅವುಗಳನ್ನು ಗುರುತಿಸುವುದೇ ಕಷ್ಟದ ಕೆಲಸ. ವಿಜ್ಞಾನಿಗಳು ಇಲ್ಲಿಯವರೆಗೆ ಆರು ಜಾತಿಗಳನ್ನು ದಾಖಲಿಸಿದ್ದಾರೆ. ಆದರೆ, ಇದೀಗ ಎರಡು ಜಾತಿಗಳನ್ನು ಗುರುತಿಸುವಲ್ಲಿ ಮಾತ್ರ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಯಶಸ್ವಿಯಾಗಿದೆ ಎನ್ನಲಾಗಿದೆ.
ಪ್ಯಾಟ್ರೀಷಿಯಾ ಡಬ್ಲ್ಯೂ ಹಾಗೂ ಫ್ರೀಮನ್ ಎಂಬ ವಿಗ್ನಾನಿಗಳ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ನಾಯಿ ಆಕಾರದ ಈ ಸಣ್ಣ ಬಾವಲಿಗಳು ಪನಾಮದ ಕೆನಾಲ್ ವಲಯ ವಲಯದಲ್ಲಿವೆ. ಕೇವಲ 4 ಸೆಂ.ಮೀ. ಇರುವ ಸಿನೋಮ್ಯಾಪ್ ಫ್ರಿಮಾನಿ ಜಾತಿಯ ಆಕಾಶ ನಾಯಿಮರಿ ಕೆಂಪು ಮತ್ತು ಕಂದು ಬಣ್ಣದ್ದಾಗಿದೆ ಎಂದು ತಿಳಿದು ಬಂದಿದೆ.
ಸಿನೋಮ್ಯಾಪ್ಸ್ ಟಾಂಕಿಗುಯಿ ಎಂಬ ಹೆಸರಿನ ಎರಡನೆಯ ಜಾತಿ ಈಕ್ವೆಡಾರ್ ಮತ್ತು ಕೊಲಂಬಿಯಾದ ಪೂರ್ವ ಆಂಡಿಸ್ನಲ್ಲಿ ಕಂಡುಬಂದಿದೆ. ಇದು ಕಪ್ಪು ಮತ್ತು ಕಂದು ಬಣ್ಣವನ್ನು ಹೊಂದಿದ್ದು ಸಿನೋಮ್ಯಾಪ್ ಫ್ರಿಮಾನಿಯಂತೆಯೇ ಇದೆ ಎನ್ನಲಾಗಿದೆ.
ಮಾರ್ಫಾಲಜಿಕಲ್ ವಿಶ್ಲೇಷಣೆ, ಅಕೌಸ್ಟಿಕ್ಸ್ ಡೇಟಾ ಮತ್ತು ಆಧುನಿಕ ಡಿಎನ್ಎ ಅಧ್ಯಯನಗಳು ಹೊಸ ಬಗೆಯ ಜಾತಿಗಳನ್ನು ಗುರುತಿಸಲು ಸಹಾಯ ಮಾಡಿದೆ. ಮಮ್ಮಿಲಿಯನ್ ಬಯಾಲಜಿಯಲ್ಲಿ ಇತ್ತೀಚೆಗೆ ಪ್ರಕಟವಾದ ವೈಜ್ಞಾನಿಕ ಪತ್ರಿಕೆಯು ಅಲ್ಟ್ರಾಸಾನಿಕ್ ರೆಕಾರ್ಡಿಂಗ್ ಸಾಧನಗಳನ್ನು ಬಳಸಿಕೊಂಡು ಹೊಸ ಜಾತಿಗಳ ಬಗ್ಗೆಯೂ ವಿವರಿಸಿದೆ.
ಸೂಕ್ತ ಡೇಟಾವನ್ನು ಹೊಂದಿರುವುದರಿಂದ ಭವಿಷ್ಯದಲ್ಲಿ ಅವುಗಳನ್ನು ಮತ್ತೆ ಹುಡುಕಲು ಮತ್ತು ಈ ಹೊಸದಾಗಿ ಪತ್ತೆ ಹಚ್ಚಿದ ಜಾತಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಗಬಹುದು “ಎಂದು ಸ್ವಿಸ್ ಆರ್ನಿಥೋಲಾಜಿಕಲ್ ಇನ್ಸ್ಟಿಟ್ಯೂಟ್ ನ ಥಾಮಸ್ ಸಟ್ಲರ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ.