ಸಂಸ್ಕೃತಿ
ಯಾನಾಗುಂದಿಯಲ್ಲಿ ಮಾತಾ ಮಾಣಿಕೇಶ್ವರಿ ದರ್ಶನ ಪಡೆದ ಜನಸಾಗರ!
ಕಲಬುರಗಿ : ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದಲ್ಲಿಂದು ಗುರುಪೂರ್ಣಿಮೆ ಪ್ರಯುಕ್ತ ಮಾತಾ ಮಾಣಿಕೇಶ್ವರಿ ಭಕ್ತರಿಗೆ ದರ್ಶನ ನೀಡಿದರು. ಗುರುಪೂರ್ಣಿಮೆ ಹಾಗೂ ಮಾತಾ ಮಾಣಿಕೇಶ್ವರಿ ಅಮ್ಮನವರ 85ನೇ ಜನ್ಮ ದಿನೋತ್ಸವವನ್ನು ಆಚರಿಸಿ ಭಕ್ತರು ಸಂಭ್ರಮಿಸಿದರು. ರಾಜ್ಯದ ಮೂಲೆ ಮೂಲೆಗಳಿಂದಷ್ಟೇ ಅಲ್ಲದೆ ಆಂದ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಭಕ್ತರು ಮಾತೆಯ ದರ್ಶನಕ್ಕೆ ಆಗಮಿಸಿದ್ದರು.
ಎಲ್ಲೆಡೆ ದೇವನಾಮ ಸ್ಮರಣೆ, ಮಾತೆ ಮಹಾದೇವಿಯ ಸ್ಮರಣೆ ಮುಗಿಲು ಮುಟ್ಟಿತ್ತು. ಗುರುಪೂರ್ಣಿಮೆಯ ವಿಶೇಷ ದಿನದಂದು ಮಾತೆಯ ದರ್ಶನ ಪಡೆದ ಭಕ್ತರು ಪುನೀತ ಭಾವ ಅನುಭವಿಸಿದರು. ಬೆಳಗ್ಗೆಯಿಂದಲೇ ಸುಕ್ಷೇತ್ರ ಯಾನಾಗುಂದಿಗೆ ಬಂದಿದ್ದ ಭಕ್ತ ಜನಸಾಗರ ಮಾತೆಯ ದರ್ಶನ ಪಡೆದು ಪೂಜಾ ಕೈಂಕರ್ಯದಲ್ಲಿ ತೊಡಿಗಿದ್ದರು.