ಪ್ರಮುಖ ಸುದ್ದಿ

ಖಾಸಗಿ ಆಸ್ಪತ್ರೆ ಬಂದ್ ಯಶಸ್ವಿ, ಚಿಕಿತ್ಸೆಗಾಗಿ ಪರದಾಡಿದ ಜನರು

ಶಹಾಪುರಃ ಖಾಸಗಿ ಆಸ್ಪತ್ರೆ ಬಂದ್ ಯಶಸ್ವಿ

ಚಿಕಿತ್ಸೆಗಾಗಿ ಪರದಾಡಿದ ತಾಯಂದಿರು

ಯಾದಗಿರಿ, ಶಹಾಪುರಃ ಭಾರತೀಯ ವೈದ್ಯಕೀಯ ಮಂಡಳಿ ರದ್ದುಗೊಳಿಸಿ ನೂತನವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆ ಮಾಡುತ್ತಿರುವದನ್ನು ವಿರೋಧಿಸಿ ಇಲ್ಲಿನ ಭಾರತೀಯ ವೈದ್ಯಕೀಯ ಮಂಡಳಿ ತಾಲೂಕು ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಕೇಂದ್ರ ಸರ್ಕಾರ ರಚಿಸುತ್ತಿರುವ ನೂತನ ಎನ್‍ಎಂಸಿ ಮಸೂದೆಯಡಿ ಹಲವಾರು ಖಾಸಗಿ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿಡುವ ಹುನ್ನಾರ ನಡೆಸಿದ್ದು, ಇದು ಜನ ವಿರೋಧಿ ನೀತಿಯಾಗಿದೆ ಎಂದು ಪ್ರತಿಭಟನಾನಿರತ ಖಾಸಗಿ ವೈದ್ಯರು ಆಕೋಶ ವ್ಯಕ್ತಪಡಿಸಿದರು.

ನೂತನ ಆಯೋಗ ರಚಿನೆಯಲ್ಲಿ ಹಲವಾರು ಸಮಿತಿ ರಚನೆ ಮಾಡಿ ಸಮಿತಿಗೊಬ್ಬರು ಪ್ರಮುಖರನ್ನು ಜನಪ್ರತಿನಿಧಿಗಳನ್ನು ನೇಮಿಸುವ ಮೂಲಕ ಖಾಸಗಿ ಆಸ್ಪತ್ರೆ ಮತತು ವೈದ್ಯರನ್ನು ನಿಯಂತ್ರಿಸುವ ಉದ್ದೇಶ ಹೊಂದಿದ್ದು, ಇದು ಸರಿಯಲ್ಲ. ಖಾಸಗಿ ಆಸ್ಪತ್ರೆಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಿದೆ.

ನೂತನ ಸೌಲಭ್ಯಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯಲಿದೆ. ಆದರೆ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಮಸೂದೆ ಪ್ರಕಾರ ಬರುವ ದಿನಗಳಲ್ಲಿ ನಾಗರಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಅಸಾಧ್ಯವಾಗಲಿದೆ. ಇದು ಜನವಿರೋಧಿ ನೀತಿಯಾಗಲಿದೆ. ಬಡವರಿಗೆ, ಶ್ರೀಮಂತರ ವಿರುದ್ಧವು ಈ ಮಸೂದೆ ಮಂಡನೆಯಾಗುತ್ತಿದೆ. ಆಯಾ ರೋಗಿಗಳು ಕ್ರಮನಾಸಾರವಾಗಿ ಚಿಕಿತ್ಸೆ ಪಡೆಯಲು ಅನುಕೂಲವಿರುವ ಪ್ರಸ್ತುತ ಸ್ಥಿತಿಗತಿಯನ್ನು ಕೇಂದ್ರ ಸರ್ಕಾರ ಬದಲು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ನೂತನ ಮಸೂದೆ ಆಯೋಗ ರಚನೆ ಕೈಬಿಡಬೇಕು ಈ ಮೊದಲಿನ ಹಳೇ ಮಂಡಳಿಯೇ ಮುಂದುವರೆಯಲಿ ಎಂದು ಮನವಿ ಮಾಡಿದರು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾನಿರತ ವೈದ್ಯರು ಎಚ್ಚರಿಸಿದ್ದಾರೆ.

ಮತು ್ತಖಾಸಗಿ ಆಯುಷ ವೈದ್ಯರು ಸಹ ಈ ಭಾಗವಹಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ಡಾ.ಸುದತ್ ದರ್ಶನಾಪುರ, ಡಾ.ವೆಂಕಟೇಶ ಟೊಣಪೆ, ಡಾ.ಎಸ್.ಬಿ.ಕಟ್ಟಿಮನಿ, ಡಾ.ಘವಳಕರ್, ಡಾ.ಚಂದ್ರಶೇಖರ ಸಗರ, ಡಾ. ಮಹಾದೇವಿ ಯಾಳವಾರ್, ಡಾ.ವಿಶಾಲ್ ಜೈನ್, ಡಾ.ರಾಜೇಂದ್ರ ತಡಿಬಿಡಿ, ಡಾ.ಬಿ.ಎಸ್.ಮುಂಬಯಿ, ಡಾ.ಬಸವರಾಜ ಇಜೇರಿ, ಡಾ.ಹಾದಿಮನಿ ಸೇರಿದಂತೆ ಇತರರಿದ್ದರು.

ಚಿಕಿತ್ಸೆಗಾಗಿ ಪರದಾಡಿದ ರೋಗಿಗಳು, ಪೋಷಕರು

ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ನೂತನ ಮಸೂದೆ ವಿರೋಧಿಸಿ ಇಲ್ಲಿನ ಖಾಸಗಿ ವೈದ್ಯರು ಶನಿವಾರ ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡುವ ಮೂಲಕ ಕೈಗೊಂಡ ಪ್ರತಿಭಟನೆ ನಿಮಿತ್ತ, ನಗರದಲ್ಲಿ ರೋಗಿಗಳು ಚಿಕಿತ್ಸೆಗಾಗಿ ಪರದಾಡಿದ ದೃಶ್ಯಗಳು ಕಂಡು ಬಂದವು.

ನಗರದ ಖಾಸಗಿ ಆಸ್ಪತ್ರೆಗಳೆಲ್ಲವು ಬಂದ್ ಆಗಿರುವದರಿಂದ ಖಾಸಗಿ ಆಸ್ಪತ್ರೆಗಳ ಮುಂದೆ ರೋಗಬಾಧೆಗಳಿಂದ ನರಳುತ್ತಿರುವ ಮಕ್ಕಳೊಂದಿಗೆ ತಾಯಂದಿರು ಕುಳಿತು ಉಪಚರಿಸುತ್ತಿರುವ, ಹಲವಡೆ ವೈದ್ಯರು ಯಾವಾಗ ಬರುತ್ತಾರೆ.?ಯಾಕೆ ಎಲ್ಲಾ ಆಸ್ಪತ್ರೆಗಳು ಬಂದ್ ಮಾಡಲಾಗಿದೆ ಎಂಬ ಇತ್ಯಾದಿ ಅಂಶಗಳನ್ನು ವಿಚಾರಿಸುತ್ತಿರುವದು ಕಂಡು ಬಂದಿತು.

ನಗರದ ಪ್ರಮುಖ ಆಸ್ಪತ್ರೆ ಮುಂದೆ ಜನ ಚಿಕಿತ್ಸೆಗಾಗಿ ವೈದ್ಯರ ಬರುವಿಕೆ ದಾರಿಯನ್ನು ಕಾಯುತ್ತಾ ಕುಳಿತ್ತಿರುವುದು ಕಂಡು ಬಂದಿತು. ವೈದ್ಯರ ಪ್ರತಿಭಟನೆಯಿಂದ ನಾಗರಿಕರು ಚಿಕಿತ್ಸೆಗಾಗಿ ಪರದಾಡಿದರು. ಯಾದಗಿರಿ, ಸುರಪುರದಲ್ಲೂ ಬಂದ್ ಇವೆ ಎಂಬ ಸುದ್ದಿ ತಿಳಿದು ಸಾರ್ವಜನಿಕರು ಸೂಕ್ತ ಚಿಕಿತ್ಸೆಗಾಗಿ ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಿದರು. ಸರ್ಕಾರಿ ಆಸ್ಪತ್ರೆ ಶನಿವಾರ ಚಿಕಿತ್ಸೆ ಪಡೆಯಲು ಜನವೋ ಜನ ಸೇರಿತ್ತು. ಸರ್ಕಾರಿ ವೈದ್ಯರು ಸಮರ್ಪಕ ಚಿಕಿತ್ಸೆ ನೀಡುವ ಮೂಲಕ ಸೌಲಭ್ಯ ಕಲ್ಪಿಸಿದರು.

 

ಖಾಸಗಿ ವೈದ್ಯರು ಕೋಟ್ಯಂತರ ರೂ.ಖರ್ಚು ಮಾಡಿ ನಾಗರಿಕರಿಗೆ ಉತ್ತಮ ಮತ್ತು ಗುಣಮಟ್ಟದ ಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದ ನಾಗರಿಕರಿಗೆ ಉತ್ತಮ ಸೌಕರ್ಯ ದೊರೆಯುತ್ತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಎನ್.ಎಂ.ಸಿ ಮಸೂದೆಯಿಂದ ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

-ಡಾ.ವೆಂಕಟೇಶ ಟೊಣಪೆ. ಶಹಾಪುರ.

 

Related Articles

One Comment

Leave a Reply

Your email address will not be published. Required fields are marked *

Back to top button