ಪ್ರಮುಖ ಸುದ್ದಿ

ಶಹಾಪುರಃ ಅಬಕಾರಿ ದಾಳಿ ಅಪಾರ ಪ್ರಮಾಣದ ನಕಲಿ ಮಧ್ಯ ಜಪ್ತಿ, ಓರ್ವನ ಬಂಧನ

ಓರ್ವ ಆರೋಪಿ ಬಂಧನ ಉಳಿದವರಿಗಾಗಿ ತನಿಖಾರಂಭ

 

ಎರಡು ಮನೆ ಮೇಲೆ ಅಬಕಾರಿ ತಂಡ ದಾಳಿ ನಕಲಿ ಮಧ್ಯ ಜಪ್ತಿ

ಓರ್ವ ಆರೋಪಿ ಬಂಧನ ಉಳಿದವರಿಗಾಗಿ ತನಿಖಾರಂಭ

180 ಬಾಕ್ಸ್ ನಕಲಿ ಮಧ್ಯ ಜಪ್ತಿ, ಅಂದಾಜು 20 ಲಕ್ಷ ಮೌಲ್ಯ

900 ಸಾವಿರ ಬಾಟಲ್ ನಕಲಿ ಮಧ್ಯ ಪ್ರಾಣಕ್ಕೆ ಕುತ್ತು

Yadgiri, ಶಹಾಪುರಃ ಕಳೆದ ಆರು ತಿಂಗಳ ಹಿಂದೆ ನಗರದ ವೈನ್ಸ್‍ವೊಂದರಲ್ಲಿ ನಕಲಿ ಮಧ್ಯ ಜಪ್ತಿ ಮಾಡಿ ವೈನ್ಸ್ ಸೀಜ್ ಮಾಡಲಾಗಿತ್ತು. ಇದೇ ವೇಳೆಗೆ ತಾಲೂಕಿನ ಚಂದಾಪುರ ಗ್ರಾಮದ ಹೊರ ವಲಯದ ತೋಟದ ಮನೆಯೊಂದರಲ್ಲಿಯೂ ನೂರಾರು ಬಾಕ್ಸ್ ನಕಲಿ ಮಧ್ಯ ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಈ ಘಟನೆ ಮಾಸುವ ಮುನ್ನವೇ ನಗರದಲ್ಲಿ ಮತ್ತೆ ಅಪಾರ ಪ್ರಮಾಣದ ನಕಲಿ ಮಧ್ಯ ಪತ್ತೆಯಾಗಿದ್ದು, ನಗರದ ಹಳಿಸಗರ ಭಾಗದ ಎರಡು ಪ್ರತ್ಯೇಕ ಮನೆ ಮೇಲೆ ಶಹಾಪುರ ಅಬಕಾರಿ ಉಪವಿಭಾಗದ ತಂಡ, ಶಹಾಪುರ ವಲಯ ತಂಡ, ಜಿಲ್ಲಾ ವಿಚಕ್ಷಣ ತಂಡ ಮತ್ತು ಗುಲ್ಬರ್ಗಾ ಅಬಕಾರಿ ತಂಡ ಈ ಎಲ್ಲಾ ತಂಡಗಳು ದಾಳಿ ಮಾಡಿದ್ದು, ದಾಳಿ ಸಮಯದಲ್ಲಿ ಒಂದು ಮನೆಯಲ್ಲಿ 50 ಬಾಕ್ಸ್ ನಕಲಿ ಮಧ್ಯ ಮತ್ತು ಇನ್ನೊಂದು ಮನೆಯಲ್ಲಿ 130 ಬಾಕ್ಸ್ ಸೇರಿದಂತೆ ಒಟ್ಟು 180 ಬಾಕ್ಸ್ ನಕಲಿ ಮಧ್ಯ ದೊರೆತಿದೆ. ಈ ಸಂದರ್ಭದಲ್ಲಿ ಒಂದು ಮನೆಯ ಮಾಲೀಕ ಮರೆಪ್ಪ ಹಣಮಂತ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

50 ಬಾಕ್ಸ್ ದೊರೆತ ಇನ್ನೊಂದು ಮನೆಯ ಮಾಲೀಕರಾದ ಕಮಲಮ್ಮ ನಿಂಗಪ್ಪ ಎಂದು ಇದ್ದು, ಅವರು ಪಾರಾಗಿದ್ದು, ಈ ಮನೆ ಬಾಡಿಗೆ ಪಡೆದಿದ್ದ ರಮೇಶ ಮಹಾದೇವಪ್ಪ ಇಟಗಿ ಆರೋಪಿಗಳು ಪರಾರಿಯಾಗಿದ್ದು, ನಕಲಿ ಮಧ್ಯ ವಶಕ್ಕೆ ಪಡೆದಿದ್ದೇವೆ. ಇನ್ನುಳಿದಂತೆ ಆರೋಪಿಗಳ ಬಂದನಕ್ಕೆ ಜಾಳ ಬೀಸಿದದ್ದು, ತನಿಖೆ ಮುಂದುವರೆದಿದೆ ಎಂದು ಅಬಕಾರಿ ಉಪ ಅಧೀಕ್ಷಕ ಮಲ್ಲಿಕಾರ್ಜುನ ರಡ್ಡಿ ಮಾಹಿತಿ ನೀಡಿದರು.

ಎರಡು ಪ್ರತ್ಯೇಕ ಮನೆಗಳ ಮೇಲೆ ದಾಳಿ ನಡೆದಿದ್ದು, ಈ ಮೊದಲು ದೊರೆತಿದ್ದ ನಕಲಿ ಮಧ್ಯಕ್ಕೂ ಇದಕ್ಕೂ ಸಾಮ್ಯತೆ ಇದ್ದು, ನಕಲಿ ಮಧ್ಯ ಎಲ್ಲಿ ತಯಾರುಗುತ್ತಿದೆ. ಶಹಾಪುರ ತಾಲೂಕಿನಲ್ಲಿ ವ್ಯಾಪಾಕವಾಗಿ ಹರಡಿದ್ದು, ಕಳೆದ ಬಾರಿ ಪ್ರಕರಣ ದಾಖಲಿಸಿದ್ದಾಗ ದೊರೆತ ನಕಲಿ ಮಧ್ಯ ಇದು ಒಂದೇ ಇದ್ದು, ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವದು ಎಂದರು.

ಅಬಕಾರಿ ನಿರೀಕ್ಷಕ ವಿಜಯಕುಮಾರ ಹಿರೇಮಠ, ಶಹಾಪುರ ಉಪ ವಿಭಾಗ ಅಬಕಾರಿ ನಿರೀಕ್ಷಕ ಧನರಾಜ, ಜಿಲ್ಲಾ ವಿಚಕ್ಷಣ ದಳದ ಅಬಕಾರಿ ನಿರೀಕ್ಷಕ ಕೇದಾರನಾಥ ಪಾಟೀಲ್, ಉಪ ನೀರಿಕ್ಷಖ ಸುರೇಶ ಮಳೇಕರ ಸೇರಿದಂತೆ ಸಿಬ್ಬಂದಿ ವರ್ಗದ ಮಹ್ಮದ ಸುಬಾನಿ, ಜೆಟ್ಟೆಪ್ಪ ಪೂಜಾರಿ, ಚಂದ್ರಶೇಖರ, ಅನೀಲಕುಮಾರ, ನಾಗರಾಜ, ಬಸವರಾಜ, ರಫೀಕ್ ಮಹಿಳಾ ಪೊಲೀಸ್ ಸುವರ್ಣ ನಾಯಕ ಇತರರು ದಾಳಿಯಲ್ಲಿ ಇದ್ದರು.

ಕಳೆದ ಬಾರಿ ಮಾಡಿದ ನಕಲಿ ಮಧ್ಯ ಇದು ಎರಡು ಸಾಮ್ಯತೆ ಹೊಂದಿದ್ದು, ಎಂಪಿರಿಯಲ್ ಬ್ಲೂ ಅಂತ ಇದೆ. ನಕಲಿ ಮಧ್ಯ ಬಾಟಲಿ ಮೇಲೆ ಸೀರಿಯಲ್ಲ ನಂಬರಗಳು ಒಂದೇ ಆಗಿರುತ್ತೇವೆ. ಸರ್ಕಾರಿ ಮಧ್ಯದ ಬಾಟಲಿ ಮೇಲೆ ಪ್ರತಿ ಬಾಟಲಿ ಮೇಲಿನ ಸಂಖ್ಯೆ ಬೇರೆ ಬೇರೆಯಾಗಿರುತ್ತದೆ.

ನಕಲಿ ಮಧ್ಯ ಸೇವನೆಯಿಂದ ಪ್ರಾಣಕ್ಕೆ ಕುತ್ತು ಇದೆ. 180 ಬಾಕ್ಸ್ ಅಂದರೆ ಸುಮಾರು 180 ಎಂಎಎಲ್‍ನ 9 ಸಾವಿರ ಬಾಟಲ್‍ಗಳಾಗಿವೆ. ಸುಮಾರು ಒಂದು ಬಾಟಲ್ ಒಬ್ಬರು ಸೇವನೆ ಮಾಡಿದ್ದರೂ 900 ಸಾವಿರ ಮಂದಿ ನಕಲಿ ಮಧ್ಯ ಸೇವನೆಯಿಂದ ಆರೋಗ್ಯ ಹದಗೆಡಿಸಿಕೊಂಡು ಪ್ರಾಣ ಕಳೆದು ಕೊಳ್ಳುವ ಸ್ಥಿತಿ ಬರುತಿತ್ತು. ನಕಲಿ ಮಧ್ಯ ಸೇವನೆ ಪ್ರಾಣಕ್ಕೆ ಕಂಟಕ.

ಮಲ್ಲಿಕಾರ್ಜುನ ರಡ್ಡಿ. ಅಬಕಾರಿ ಉಪ ಅಧೀಕ್ಷಕ.

 

Related Articles

Leave a Reply

Your email address will not be published. Required fields are marked *

Back to top button