ಪ್ರಮುಖ ಸುದ್ದಿ
ACB ಬಲೆಗೆ ಬಿದ್ದ ಕೊಪ್ಪಳ ಡಿಸಿ ಸೆಲೀನಾ
ಲಂಚ ಸ್ವೀಕರಿಸುವ ವೇಳೆ ದಾಳಿ, ಎಸಿಬಿ ವಶಕ್ಕೆ ಡಿಸಿ ಸೆಲೀನಾ
ACB ಬಲೆಗೆ ಬಿದ್ದ ಕೊಪ್ಪಳ ಡಿಸಿ ಸೆಲೀನಾ
1 ಲಕ್ಷ ಅಡ್ವಾನ್ಸ್ ಸ್ವೀಕಾರ ವೇಳೆ ದಾಳಿ ACB ವಶಕ್ಕೆ ಡಿಸಿ
ಕೊಪ್ಪಳಃ ಹೊಸ ಬಾರ್ ಲೈಸನ್ಸ್ ನೀಡಲು ಮೂರು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಬಕಾರಿ ಡಿಸಿ ಸೆಲೀನಾ ವ್ಯಕ್ತಿಯಿಂದ ಮುಂಗಡವಾಗಿ ಒಂದು ಲಕ್ಷ ರೂ.ಪಡೆಯುವಾಗ ಎಸಿಬಿ ತಂಡ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದುಕೊಂಡ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.
ಶೈಲಜಾ ಪ್ರಭಾಕರಗೌಡ ಎಂಬುವರು ಹೊಸ ಬಾರ್ ಲೈಸನ್ಸ್ ಗಾಗಿ ಅರ್ಜಿ ಸಲ್ಲಿಸಿದ್ದರು, ಲೈಸನ್ಸ್ ನೀಡಲು 3 ಲಕ್ಷ ರೂ. ಡಿಸಿ ಸೆಲೀನಾ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಶೈಲಜಾ ಅವರು ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿರುವ ಕಾರಣ ಎಸಿಬಿ ಸಮರ್ಪಕ ಯೋಜನೆ ರೂಪಿಸಿ ದಾಳಿ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಅಬಕಾರಿ ಡಿಸಿ ಸೆಲೀನಾ ಲಂಚ ಸ್ವೀಕರಿಸುವ ವೇಳಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಸೂಕ್ತ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.