ಬೇಲೂರು ಬಳಿ ಬಸ್ಸ್-ಕಾರು ಡಿಕ್ಕಿ. ವಿದ್ಯಾರ್ಥಿಗಳ ಸಾವು.!
ಹಾಸನ, ಬೇಲೂರು: ಕೆಎಸ್ಆರ್ಟಿಸಿ ಬಸ್ ಹಾಗು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐವರು ವಿದ್ಯಾಥಿಗಳು ಮೃತಪಟ್ಟಿರುವ ದಾರುಣ ಘಟನೆ ಬೇಲೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ ಕಲ್ಕೆರೆ ಸಂಕೇನಹಳ್ಳಿ ಬಳಿ ನಡೆದಿದೆ.
ಅಕ್ಬಲ್(18), ಫಯಾಜ್ ಮೊಹಮ್ಮದ್(18), ಇಮ್ರಾನ್ ಮೃತಪಟ್ಟ ವಿದ್ಯಾರ್ಥಿಗಳಾಗಿದ್ದು, ಇನ್ನೂ ಇಬ್ಬರ ಗುರುತು ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತಪಟ್ಟ ವಿದ್ಯಾರ್ಥಿಗಳು ಪಟ್ಟಣದ ವಿದ್ಯಾವಿಕಾಸ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.
ಇನ್ನೂ ಬೆಂಗಳೂರಿನಿಂದ ಚಿಕ್ಕಮಗಳೂರಿನ ಕಡೆ ತೆರಳುತ್ತಿದ್ದ ಸಾರಿಗೆ ಬಸ್ನ್ನು ಓವರಟೇಕ್ ಮಾಡುವ ಅತಿವೇಗವಾಗಿ ಕಾರು ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ