ಸಿಂದಗಿ ಸಿಪಿಐ ಮತ್ತು ಪತ್ನಿ ಅಪಘಾತದಲ್ಲಿ ಸಾವು
ಜೇವರ್ಗಿಯ ನೆಲೋಗಿ ಬಳಿ ಘಟನೆ
ಕಲ್ಬುರ್ಗಿಃ ಸಿಂದಗಿ ತಾಲೂಕಿನ ಸಿಪಿಐ ರವಿ ಉಕ್ಕುಂದ ಹಾಗೂ ಅವರ ಧರ್ಮಪತ್ನಿ ಮಧು ಆರ್.ಉಕ್ಕುಂದ ದಂಪತಿಗಳಿಬ್ಬರು ಅಪಘಾತದವೊಂದರಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಬಳಿ ತಾಸು ಹೊತ್ತು ಹಿಂದೆ ದುರ್ಘಟನೆ ನಡೆದಿದೆ.
ಕಲ್ಬುರ್ಗಿ ನಗರಕ್ಕೆ ಕಾರೊಂದರಲ್ಲಿ ಪತ್ನಿ ಸಮೇತ ತೆರಳುತ್ತಿದ್ದ ಸಿಪಿಐ ಉಕ್ಕುಂದ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕ್ಯಾಂಟನರ್ ಗೆ ಡಿಕ್ಕಿ ಹೊಢದ ಪರಿಣಾಮ ದಂಪತಿಗಳಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕಂಬನಿ ಮಿಡಿದಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.