ರಸ್ತೆ ಅಪಘಾತ ಅಪರಿಚಿತ ವ್ಯಕ್ತಿ ಸಾವು
yadgiri, ಶಹಾಪುರಃ ಅಪರಿಚಿತ ವ್ಯಕ್ತಿಯೋರ್ವನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಹೋದ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆದಲ್ಲಿಯೇ ವ್ಯಕ್ತಿ ತಲೆಗೆ ರಕ್ತಸಿಕ್ತ ಗಾಯಗೊಂಡು ಸಾವನ್ನಪ್ಪಿದ ಘಟನೆ ತಾಲೂಕಿನ ಕೊಂಗಂಡಿ ಗ್ರಾಮ ಸಮೀಪ ಸುರಪುರ ರಸ್ತೆಯಲ್ಲಿ ಶುಕ್ರವಾರ ಬೆಳಗಿನಜಾವ ನಡೆದಿದೆ.
ರಸ್ತೆ ಅಪಘಾತದಲ್ಲಿ ಈ ವ್ಯಕ್ತಿ ಮೃತಪಟ್ಟಿದ್ದು, ವ್ಯಕ್ತಿಗೆ ಡಿಕ್ಕಿ ಹೊಡೆದು ವಾಹನವು ಯಾವುದೇಂದು ತಿಳಿದು ಬಂದಿಲ್ಲ. ಮೃತ ವ್ಯಕ್ತಿಯ ದೇಹ ನಗರ ಸರ್ಕಾರಿ ಆಸ್ಪತೆಯ ಶವಾಗಾರದಲ್ಲಿಡಲಾಗಿದ್ದು, ಸಂಬಂಧಪಟ್ಟವರು ಅನುಮಾನ ಬಂದಲ್ಲಿ ನಗರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.