ಪ್ರಮುಖ ಸುದ್ದಿ
BJPಗೆ ನಿತಿನ್ ಗಡ್ಕರಿ ಎಚ್ಚರಿಕೆ

ಕಾಂಗ್ರೆಸ್ ಮಾಡಿದ ತಪ್ಪುಗಳನ್ನೇ ನಾವು ಮುಂದುವರಿಸಿದರೆ ನಮ್ಮ ಆಡಳಿತದಿಂದ ಪ್ರಯೋಜನವಿಲ್ಲ ಎಂದು BJPಗೆ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ. ಗೋವಾದಲ್ಲಿ ಮಾತನಾಡಿ, BJP ಆಡಳಿತದಲ್ಲಿ ಭಿನ್ನತೆ ಹೊಂದಿರುವ ಪಕ್ಷವಾಗಿದೆ.
ಅದಕ್ಕಾಗಿ ಪಕ್ಷ ಮತದಾರರ ವಿಶ್ವಾಸ ಗೆದ್ದಿದೆ. ನಾವು ಕಾಂಗ್ರೆಸ್ ತಪ್ಪುಗಳನ್ನೇ ಮುಂದುವರಿಸಿದರೆ, ಅವರ ನಿರ್ಗಮನ & ನಮ್ಮ ಪ್ರವೇಶದಿಂದ ಪ್ರಯೋಜನವಿಲ್ಲ. ನಮ್ಮದು ಭಿನ್ನತೆ ಹೊಂದಿರುವ ಪಕ್ಷ ಎಂದು ಅಡ್ವಾಣಿ ಅವರು ಹೇಳುತ್ತಿದ್ದರು. ಇತರ ಪಕ್ಷಗಳಿಗಿಂತ ಎಷ್ಟು ಭಿನ್ನವಾಗಿದ್ದೇವೆ ಎಂಬುದನ್ನು ನಾವು. ಅರ್ಥಮಾಡಿಕೊಳ್ಳಬೇಕು ಎಂದರು.