ಪ್ರಮುಖ ಸುದ್ದಿ
ಲಾರಿ ಡಿಕ್ಕಿ ಪಾನಿಪುರಿ ವ್ಯಾಪಾರಿ ಸಾವು
ಲಾರಿ ಡಿಕ್ಕಿ ಪಾನಿಪುರಿ ವ್ಯಾಪಾರಿ ಸಾವು
yadgiri, ಶಹಾಪುರಃ ಪಾನಿಪುರ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಪಾನಿಪುರಿ ಸಲಕರಣೆಗಳೊಂದಿಗೆ ಬೈಕ್ ಮೇಲೆ ಶಹಾಪುರದಿಂದ ಹತ್ತಿಗೂಡೂರ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹೊರವಲಯದಲ್ಲಿ ಬುಧವಾರ ನಡೆದಿದೆ.
ಮೃತ ವ್ಯಕ್ತಿಯ ಹೆಸರು ಚಂದ್ರಬಾನು (45) ಮೂಲತಃ ಉತ್ತರ ಪ್ರದೇಶದವನಾಗಿದ್ದು, ಈತ ಶಹಾಪುರ ತಾಲೂಕಿನ ಹತ್ತಿಗೂಡೂರ ಭಾಗದ ಹಳ್ಳಿ ಹಳ್ಳಿಗೆ ತೆರಳಿ ಪಾನಿಪೂರಿ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.
ಬುಧವಾರ ಬೆಳಗ್ಗೆ ಎಂದಿನಂತೆ ಪಾನಿಪುರಿ ಸಲಕರಣೆಗಳೊಂದಿಗೆ ಬೈಕ್ ಮೇಲೆ ಹೊರಟಿದ್ದಾಗ ಘಟನೆ ಸಂಭವಿಸಿದೆ. ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪಿಐ ಚನ್ನಯ್ಯ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ, ಲಾರಿ ವಶಕ್ಕೆ ಪಡೆದಿದ್ದು, ಚಾಲಕನನ್ನು ಬಂಧಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
——————————