ಪ್ರಮುಖ ಸುದ್ದಿ
ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸವಾರರಿಬ್ಬರ ಸಾವು

ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸವಾರರಿಬ್ಬರ ಸಾವು
ಶಹಾಪುರಃ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಮುಗಿಸಿಕೊಂಡು ಮರಳಿ ಸ್ವಗ್ರಾಮಕ್ಕೆ ತೆರುಳುತ್ತಿರುವಾಗ ಮಾರ್ಗ ಮಧ್ಯ ಎದುರಾದ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಸಾವನ್ನಪ್ಪಿದ ಘಟನೆ ತಾಲೂಕಿನ ಹತ್ತಿಗೂಡೂರ ಸಮೀಪದ ದೇವದುರ್ಗ ಕ್ರಾಸ್ ಬಳಿ ಗುರುವಾರ ನಡೆದಿದೆ.
ಹೆಮ್ಮಡಗಿ ಗ್ರಾಮ ನಿವಾಸಿಗಳು ಎನ್ನಲಾದ ಶರಣಪ್ಪ ತಂದೆ ಬಸವರಾಜ ಪಾಟೀಲ್ (22) ಮತ್ತು ನಾಗರಾಜ ತಂದೆ ಬಸವರಾಜ (25) ಎಂದು ಗುರುತಿಸಲಾಗಿದೆ. ಇವರು ಟಿಪ್ಪರ್ ಚಾಲಕರಾಗಿದ್ದು, ಶಹಾಪುರದಿಂದ ಬೈಕ್ ಮೇಲೆ ಸ್ವಗ್ರಾಮಕ್ಕೆ ತೆರಳುವಾಗ ಘಟನೆ ನಡೆದಿದೆ ಎನ್ನಲಾಗಿದೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
——————-