ಶಹಾಪುರ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ದೃಢ, ಸರ್ಕಾರಿ ಆಸ್ಪತ್ರೆ ಸೀಲ್ ಡೌನ್.?
ಶಹಾಪುರ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್, ಸರ್ಕಾರಿ ಆಸ್ಪತ್ರೆ ಸೀಲ್ ಡೌನ್
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಸರ್ಕಾರಿ ಆಸ್ಪತ್ರೆ ‘ಡಿ’ ಗ್ರೂಪ್ ನೌಕರ ಓರ್ವನಿಗೆ ಕೊರೊನಾ ಪಾಸಿಟಿವ್ ದೃಢವಾದ ಹಿನ್ನೆಲೆ ಇಲ್ಲಿನ ಸರ್ಕಾರಿ ಆಸ್ಪತ್ರೆ ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗುತ್ತಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಪಾಸಿಟಿವ್ ದೃಢ ಸಿಬ್ಬಂದಿ ಭೀಮರಾಯನ ಗುಡಿ ಕೋವಿಡ್-19 ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕಳೆದ ವಾರವಷ್ಟೆ ಅಲ್ಲಿಂದ ರಿಲೀವ್ ಆಗಿ ವಾಪಸ್ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ಕ್ಕೆ ಹಾಜರಾಗಿದ್ದ ಎನ್ನಲಾಗಿದೆ.
ಕೋವಿಡ್ ಆಸ್ಪತ್ರೆ ಯಿಂದ ರಿಲೀವ್ ಆಗುವ ಮುನ್ನ ಆತ ಗಂಟಲು ದ್ರವ ಮತ್ತು ರಕ್ತ ಮಾದರಿಗೆ ಪರೀಕ್ಷೆಗೆ ಒಳಗಾಗಿದ್ದ ಎನ್ನಲಾಗಿದೆ. ಇದೀಗ ಪರೀಕ್ಷೆ ವರದಿ ಬಂದಿದ್ದು, ಆತನಿಗೆ ಕೊರೊನಾ ಅಟ್ಯಾಕ್ ಆಗಿರುವ ವರದಿ ಬಂದಿದೆ ಎನ್ನಲಾಗಿದೆ.
ಸಮುದಾಯಕ್ಕೆ ಪಸರಿಸಿದೆಯೇ.?
ಕೊರೊನಾ ವೈರಸ್ ಮೆಲ್ಲ ಮೆಲ್ಲನೆ ಸಮುದಾಯ ಹಂತಕ್ಕೆ ಪಸರಿಸುತ್ತಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಮೊನ್ನೆ ಅಷ್ಟೆ ಭೀಮರಾಯನ ಗುಡಿ ಕೃಷ್ಣಾ ಕಾಡಾ ಸೀಲ್ ಡೌನ್ ಮಾಡಲಾಗಿತ್ತು.
ಅಲ್ಲಿನ ಎಇಇ ಒಬವ್ಬರಿಗೆ ಪಾಸಿಟಿವ್ ದೃಢವಾದ ಹಿನ್ನೆಲೆ ಕೃಷ್ಣಾ ಕಾಡಾ ಕಚೇರಿ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ನಗರ ಸರ್ಕಾರಿ ಆಸ್ಪತ್ರೆ ಸೀಲ್ ಡೌನ್ ಆಗುತ್ತಿದೆ.
ಇಷ್ಟಾದರೂ ಜನರು ಜಾಗೃತರಾಗುತ್ತಿಲ್ಲ. ಮಹಾರಾಷ್ಟ್ರ, ದೆಹಲಿ ಅಲ್ಲದೆ ಬೆಂಗಳುರ ಮಹಾನಗರ ತತ್ತರಿಸಿ ಹೋಗಿದೆ. ಕೊರೊನಾ ತಗುಲಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಸಮರ್ಪಕ ಚಿಕಿತ್ಸೆ ದೊರೆಯುವದು ಕಷ್ಟವಿದ್ದು, ಸಾಕಷ್ಟು ರೋಗಿಗಳು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆದಾಗ್ಯೂ ಜನ ಕಿವಿಗೊಡುತ್ತಿಲ್ಲ. ಅಪಾಯವನ್ನು ಮೈಮೇಲೆಳೆದು ಕೊಂಡಾಗಲೇ ಅದರ ಪರಿಸ್ಥಿತಿ ಅರಿವಿಗೆ ಬರಲಿದೆ.