ಮನೆಯಲ್ಲಿ ಲಕ್ಷ್ಮೀ ವಾಸ ಮಾಡಬೇಕೆ.? ಅಡಿಕೆಗಿದೆ ಆ ಶಕ್ತಿ.!
ಅಡಿಕೆ ಮತ್ತು ಲವಂಗದ ಮಹತ್ವ
–ಗಿರಿಧರ ಶರ್ಮಾ. ಜ್ಯೋತಿಷಿ 9945098262.
ಒಂದು ಲವಂಗ ಹಾಗೂ ಒಂದು ಅಡಿಕೆಯಿಂದ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣಗೊಳಿಸಬಹುದು. ಹೌದು ಅಂತಹ ಶಕ್ತಿ ಈ ವಸ್ಯಗಳಲ್ಲಿ ನೈಸರ್ಗಿಕ ವಾಗಿಯೇ ಬಂದಿದೆ ಎನ್ನಲಾಗುತ್ತಿದೆ.
ಲವಂಗ ಮತ್ತು ಅಡಿಕೆಗಳನ್ನು ಶುಭ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಇವು ಸಕರಾತ್ಮಕತೆಯನ್ನು ಉಂಟು ಮಾಡಲಿವೆ ಎಂಬುದು ವೈಜ್ಞಾನಿಕ ವಾಗಿಯೂ ದೃಢ ಪಟ್ಟಿದೆ ಎನ್ನಲಾಗಿದೆ.
ಒಂದು ಕೆಲಸಕ್ಕೆ ಹೋಗುವ ಮೊದಲು ಅಡಿಕೆಯೊಂದನ್ನು ಜೇಬಿನಲ್ಲಿಟ್ಟುಕೊಂಡು ಒಂದು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದರ ರಸ ಹೀರುತ್ತಾ ಗಣೇಶನ ಮಂತ್ರ ಶುಕ್ಲಾಂ ಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಜ್ಞೋಪ ಶಾಂತಯೇ..ಎನ್ನುವ ಮಂತ್ರವನ್ನು ಜಪಿಸಿ ಜೊತೆ ವಕ್ರತುಂಡ ಮಹಾಕಾಯ ಇದನ್ನು ಹೇಳಬಹುದು.
ಹೀಗೆ ಒಟ್ಟಾರೆ ಗಣೇಶ ಮಂತ್ರ ಜಪಿಸುತ್ತಾ ಹೋದ ಕೆಲಸವನ್ನು ಮುಗಿಸಿ. ಮರಳಿ ಮನೆಗೆ ಬಂದ ಮೇಲೆ ಜೇಬಿನಲ್ಲಿಟ್ಟುಕೊಂಡಿದ್ದ ಅಡಿಕೆಯೊಂದನ್ನು ಮನೆಯ ಕಪಾಟವೊಂದರಲ್ಲಿಟ್ಟು ಅದಕ್ಕೆ ಕುಂಕುಮ, ಅರಿಶಿಣ ಹಚ್ಚಿ ಅಕ್ಷತೆ ಹಾಕಿ ಪೂಜೆ ಸಲ್ಲಿಸಬೇಕು.
ಹೀಗೆ ಪೂಜೆ ಮಾಡಿದ ಅಡಿಕೆ ಶುಭಕರವಾಗಿ ಲಾಭ ತರಲಿದೆ ಎಂಬುದು ಹಿರಿಯರ ನಂಬಿಕೆಯಾಗಿದೆ. ಇಂದಿಗೂ ಇದನ್ನು ಸಾಕಷ್ಟು ಜನರು ರೂಢಿಸಿಕೊಂಡಿದ್ದಾರೆ.