ವಕೀಲರು ವೃತ್ತಿ ಘನತೆ ಕಾಪಾಡಿಕೊಳ್ಳಲು ನ್ಯಾ.ಪ್ರಭು ಬಡಿಗೇರ ಸಲಹೆ
ಸಂಪಾದನೆಗಾಗಿ ಓದಬೇಡಿ ಜ್ಞಾನಾರ್ಜನೆಗಾಗಿ ಓದಿ
ಯಾದಗಿರಿ, ಶಹಾಪುರಃ ವಕೀಲರು ವೃತ್ತಿ ಘನತೆ ಕಾಪಾಡಿಕೊಳ್ಳಬೇಕು. ಹಿರಿಯ ವಕೀಲರಿಗೆ ಗೌರವಾದರ ನೀಡಬೇಕು. ಒಗ್ಗಟ್ಟಿನಿಂದ ಪರಸ್ಪರರ ಗೌರವಯುತ ವೃತ್ತಿ ನಿಭಾಯಿಸಬೇಕು. ವಕೀಲ ವೃತ್ತಿಗೆ ಸಮಾಜದಲ್ಲಿ ಅಗಾಧ ಗೌರವವಿದೆ ಅದನ್ನು ಉಳಿಸಕೊಂಡು ಹೋಗಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಪ್ರಭು ಎನ್.ಬಡಿಗೇರ ಹೇಳಿದರು.
ಶಹಾಪುರ ನಗರದ ನ್ಯಾಯಾಲಯದಲ್ಲಿ ಗುರುವಾರ ವಕೀಲರ ಸಂಘದ ನವೀಕರಿಸಿದ ನೂತನ ಕೋಣೆ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ವಕೀಲರಾಗಬೇಕೆಂಬ ಕನಸು ಹೊಂದಿದ್ದರೆ, ಕಾನೂನು ಪುಸ್ತಕಗಳು, ಹೊಸ ಪ್ರಕರಣಗಳ ತೀರ್ಪು, ದೈವಶಿಕ್ಷೆ, ವಿಮರ್ಶೆ ನೂತನ ತಿದ್ದುಪಡಿಗಳನ್ನು ಓದಬೇಕು. ಪರಿಪೂರ್ಣವಾಗಿ ಕಾನೂನಿನ ಜ್ಞಾನ ಪಡೆಯುವ ಜತೆಗೆ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ಕಿರಿಯ ವಕೀಲರಿಗೆ ಕಿವಿ ಮಾತು ಹೇಳಿದರು.
ಅಲ್ಲದೆ ಪ್ರಸ್ತುತ ಯುವ ವಕೀಲರಲ್ಲಿ ಓದುವ ಅಭಿರುಚಿ ಕಡಿಮೆಯಾಗಿದೆ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಸ್ತಕ ಹುಡುಕಾಟ ನಡೆಸಿ ಅದನ್ನು ಓದಿ ತದನಂತರ ಆ ಪ್ರಕರಣ ಕುರಿತು ಮಾತನಾಡುವಂತ ವಕೀಲರಿದ್ದಾರೆ. ತಕ್ಷಣ ಆ ಪ್ರಕರಣಕ್ಕೆ ಸಮಬಂಧಿಸಿದ ಕಾನೂನು ತಿಳುವಳಿಕೆ ವ್ಯಕ್ತಪಡಿಸುವ ಜ್ಞಾನದ ಕೊರತೆಯನ್ನು ಯುವ ವಕೀಲರು ಎದುರಿಸುವಂತಾಗಿದೆ.
ಅದಕ್ಕೆ ಕಾರಣ ಯುವ ವಕೀಲರು ಸಮರ್ಪಕವಾಗಿ ಅಭ್ಯಾಸ ಮಾಡದಿರುವುದೇ ಕಾರಣ. ಅದಕ್ಕಾಗಿ ಎಲ್ಲರೂ ಸಂಪಾದನೆಗಾಗಿ ಓದಬೇಡಿ. ಜ್ಞಾನಾರ್ಜನೆಗಾಗಿ ಓದಿ. ನಿಮ್ಮ ಅಗಾಧ ಜ್ಞಾನವೇ ನಿಮಗೆ ಮುಮದೆ ಬೆಲೆ ತಂದು ಕೊಡಲಿದೆ.
ಯಾವುದೇ ಪ್ರಕರಣದ ಬಗ್ಗೆ ಕುಲಂಕುಷವಾಗಿ ಅಭ್ಯಾಸ ಮಾಡಿ ಆ ಪ್ರಕರಣದ ಗೆಲುವಿಗೆ ಶ್ರಮಿಸಿ. ನಿಮ್ಮ ಮೇಲೆ ವಿಶ್ವಾಸವಿಟ್ಟು ಬಂದ ಗ್ರಾಹಕರನ್ನು ಉಳಿಸಿ ನಂಬಿಕೆಗೆ ದ್ರೋಹ ಬಗೆಯದಿರಿ ಎಂದು ಸಲಹೆ ನೀಡಿದರು. ವೃತ್ತಿ ಗೌರವ ಕಾಪಾಡಿದ್ದಲ್ಲಿ ಅದು ನಿಮ್ಮನ್ನು ಕಾಪಾಡಲಿದೆ ಮತ್ತು ಬೆಳೆಸಲಿದೆ ಎಂದರು.
ಸಂಘದ ಅಧ್ಯಕ್ಷ ಸಾಲೋಮನ್ ಆಲ್ಫ್ರೆಡ್ ಮಾತನಾಡಿ. ವಕೀಲರ ಸಂಘವನ್ನು ಪರಸ್ಪರು ವಿಶ್ವಾಸವಿಟ್ಟು ಸಂಘದ ಬಲವರ್ಧನೆಗೆ ಶ್ರಮಿಸಬೇಕು. ಸಂಘದಲ್ಲಿ ಯಾವುದೇ ಪ್ರಭಾವ ಬೀರುವ ಯತ್ನ ಮಾಡಬಾರದು. ಉತ್ತಮ ವಕೀಲರನ್ನು ಬೆಳೆಸಬೇಕು. ವಕೀಲರು ಶಿಸ್ತು, ಸಂಯಮದಿಂದ ವೃತ್ತಿ ಘನತೆ ಕಾಪಾಡಿಕೊಳ್ಳಬೇಕು.
ಸಮಾಜದಲ್ಲಿ ವಕೀಲರ ಬಗ್ಗೆ ಸಂಶಯಾತ್ಮಕ ನಕರಾತ್ಮಕ ಧೋರಣೆ ಉಂಟಾಗುತ್ತಿದೆ. ಕಾರಣ ಎಲ್ಲರೂ ಸಂಯಮದಿಂದ ಹಣದ ಆಮಿಷಕ್ಕೆ ಒಳಗಾಗದೇ ತಮ್ಮ ಕೈಂಟ್‍ಗಳಿಗೆ ನ್ಯಾಯ ಒದಗಿಸುವ ಮೂಲಕ ಭರವಸೆ ನಂಬಿಕೆ ಉಳಿಸಿಕೊಳ್ಳುವ ಅಗತ್ಯವಿದೆ ಎಂದರು.
ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ ಉಪಸ್ಥಿತರಿದ್ದರು. ಹಿರಿಯ ವಕೀಲರಾದ ಶ್ರೀನಿವಾಸ ಕುಲಕರ್ಣಿ, ಆಸ್ಕರ್‍ರಾವ ಮುಡಬೂಳ, ಸಿ.ಟಿ.ದೇಸಾಯಿ, ನೈಯ್ಯುಮ ಅಹ್ಮದ್, ಕೃಷ್ಣಮೂರ್ತಿ, ಎಚ್.ಎಸ್.ಮರಕಲ್, ಗುರು ದೇಶಪಾಂಡೆ, ಸಿದ್ದು ಪಸ್ಪೂಲ್, ಎಂ.ಆರ್.ಬಕ್ಕಲ್, ಆರ್.ಎಂ.ಹೊನ್ನಾರಡ್ಡಿ ಸೇರಿದಂತೆ ಇತರರಿದ್ದರು. ಬಿ.ಎಂ.ರಾಂಪೂರೆ ನಿರೂಪಿಸಿದರು. ಎಸ್.ಎಸ್.ಕಂಚಿ ಸ್ವಾಗತಿಸಿದರು. ಎಂ.ಎನ್.ಪೂಜಾರಿ ವಂದಿಸಿದರು.
ಕೋಣೆ ಸದಾ ಸ್ವಚ್ಛತೆಯಿಂದ ಕೂಡಿರಲಿ
ವಕೀಲರು ಸಂಘದ ಕೋಣೆಯಲ್ಲಿನ ಚೇರ್, ಖುರ್ಚಿ ಸೋಫಾ ಇತರೆ ಸಾಮಾಗ್ರಿಗಳಿದ್ದು, ಅವುಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಅಗತ್ಯವಿದೆ. ಬೇಕಾಬಿಟಟಿಯಾಗಿ ಗಲೀಜು ಮಾಡಿದ್ದಲ್ಲಿ ವಕೀಲರ ವೃತ್ತಿ ಘಟನೆತೆ ಧಕ್ಕೆ ಬರಬಾರದು.
ಉತ್ತಮ ಕೋಣೆ ನಿರ್ಮಾಣಗೊಂಡಿದ್ದು, ಇಷ್ಟೆಲ್ಲ ಖರ್ಚು ಮಾಡಿರುವದಕ್ಕೂ ಸಾರ್ಥಕವಾಗಬೇಕು. ಎಲ್ಲಾ ವಕೀಲರು ತಮ್ಮದೆ ಕಚೇರಿಯಂತೆ ನೋಡಿಕೊಳ್ಳಬೇಕು. ಶಿಸ್ತುಬದ್ಧವಾಗಿ ವಕೀಲರು ನಡೆದುಕೊಳ್ಳಬೇಕು. ವಕೀಲರ ಕೋಣೆ ಸದುಪಯೋಗವಾಗಲಿ.
ವಿಶ್ರಾಂತಿ ಪಡೆಯುವದೊಂದೆ ಎಂದುಕೊಂಡು ಅಶಿಸ್ತು ಕಂಡಲ್ಲಿ ಅದಕ್ಕೆ ಬೆಲೆ ಬರುವದಿಲ್ಲ. ಕೋಣೆಯಲ್ಲಿ ಎಲ್ಲವೂ ಸಮಾಗ್ರಿಗಳ ಬಳಕೆ ಸಹಿತ ಶಿಸ್ತಿನಿಂದ ಕೂಡಿರಲಿ. ಕೋಣೆ ಸದಾ ಸ್ವಚ್ಛತೆಯಿಂದ ಕೂಡಿರಲಿ ಎಂದು ಹಲವು ಸಲಹೆ ಸೂಚನೆಗಳನ್ನು ಹಿರಿಯ ಶ್ರೇಣಿ ನ್ಯಾಯಧೀಶ ಪ್ರಭು ಬಡಿಗೇರ ಕಿವಿ ಮಾತು ಹೇಳಿದರು.