ಶಹಾಪುರ ವಕೀಲರ ಸಂಘದ ಚುನಾವಣೆ-ಶಾಂತಗೌಡ ಪ್ಯಾನೆಲ್‍ಗೆ ಭರ್ಜರಿ ಗೆಲುವು
ಶಹಾಪುರ ವಕೀಲರ ಸಂಘದ ಚುನಾವಣೆ
yadgiri, ಶಹಾಪುರ: 2021-22ನೇ ಸಾಲಿನ ವಕೀಲರ ಸಂಘದ ಆಡಳಿತ ಮಂಡಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶಾಂತಗೌಡ ಪಾಟೀಲ್ ಪ್ಯಾನೇಲ್ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 142 ಸದಸ್ಯರಿದ್ದು ಅದರಲ್ಲಿ 140 ಸದಸ್ಯರು ಮತಚಲಾಯಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಎಸ್.ಗೋಪಾಲ ತಳವಾರ ಹಾಗೂ ಸಂತೋಷ ಸತ್ಯಂಪೇಟೆ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಶಾಂತಗೌಡ ಪಾಟೀಲ್(80) ಮತ ಪಡೆದರೆ ಸಂತೋಷ ದೇಶಮುಖ (57) ಮತಗಳಿಗೆ ತೃಪ್ತಿಪಟ್ಟರು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೈಯ್ಯಾಳಪ್ಪ ಹೊಸ್ಮನಿ(93), ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಶರಣಪ್ಪ ಸಜ್ಜನ(75), ಗ್ರಂಥಪಾಲಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಶರಣರಾಜ ಮುದನೂರ(82) ಹಾಗೂ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ನಜೀಮಾಬೇಗಂ(79) ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಂತಸವನ್ನು ಹಂಚಿಕೊಂಡ ನೂತನ ಅಧ್ಯಕ್ಷ ಶಾಂತಗೌಡ ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಈಗ ಚುನಾವಣೆಯ ಮುಗಿಯಿತು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ವಕೀಲರು ಅಂದ ಮೇಲೆ ಎಲ್ಲರೂ ಒಂದೇ. ಚುನಾವಣೆ ವಿಷಯ ಚುನಾವಣೆಗೆ ಮಾತ್ರ ಸೀಮಿತ ಎಂದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡ ಸಂತೋಷ ದೇಶಮುಖ ಮಾತನಾಡಿ, ಚುನಾವಣೆಯಲ್ಲಿ ಸೋಲು ಗೆಲವು ಸಾಮಾನ್ಯ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ಸಂಘದ ಹಿರಿಯ ವಕೀಲರಾದ ಚಂದ್ರಶೇಖರ ಲಿಂಗದಳ್ಳಿ, ಆರ್.ಎಂ.ಹೊನ್ನಾರಡ್ಡಿ, ಎಂ.ಆರ್. ಮಾಲಿ ಪಾಟಿಲ್, ಸಯ್ಯದ ಇಬ್ರಾಹಿಂಸಾಬ್ ಜಮದಾರ, ವಿಶ್ವನಾಥರಡ್ಡಿ ಸಾಹು, ಯೂಸೂಫ್ ಸಿದ್ದಕಿ, ಮಲ್ಕಪ್ಪ ಪಾಟೀಲ್, ಎಂ.ಎಸ್.ರಾಂಪುರೆ, ಸಂದೀಪ ದೇಸಾಯಿ, ತಮ್ಮಣ್ಣಗೌಡ ಜೋಳದ, ರಾಮಣ್ಣಗೌಡ ಕೊಲ್ಲೂರ, ಭೀಮಣ್ಣಗೌಡ, ಜೈಲಾಲ ತೋಟದಮನೆ, ರಮೇಶ ಸೇಡಂಕರ್, ಸಿದ್ದು ಪಸ್ತೂಲ್, ಬಿಎಂ.ರಾಂಪುರೆ, ಸುನಂದಾ ಬೆಂಗಿ ಇದ್ದರು.