ಬೀದರಃ ಅಂಬಾ ಭವಾನಿ ಪಲ್ಲಕ್ಕಿ ಉತ್ಸವ, ಅದ್ದೂರಿ ಮೆರವಣಿಗೆ
ಮಂಗಲಪೇಟ ಅಂಬಾ ಭವಾನಿ ಪ್ರತಿಮೆ ಮೆರವಣಿಗೆ, ಪಲ್ಲಕ್ಕಿ ಉತ್ಸವ
ಬೀದರಃ ಅಂಬಾ ಭವಾನಿ ಪಲ್ಲಕ್ಕಿ ಉತ್ಸವ, ಮೆರವಣಿಗೆ
ಮಂಗಲಪೇಟ ಅಂಬಾ ಭವಾನಿ ಪ್ರತಿಮೆ ಮೆರವಣಿಗೆ
ಬೀದರಃ ಮಂಗಲಪೇಟ ಬಡಾವಣೆಯ ತಾಯಿ ಅಂಬಾ ಭವಾನಿ ಮಂದಿರದಿಂದ ಭಾವನಿ ಪ್ರತಿಮೆ ಮೆರವಣಿಗೆ ಜತೆಗೆ ಪಲ್ಲಕ್ಕಿ ಉತ್ಸವ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ.
ಮಂಗಲಪೇಟ ಮೂಲ ಭಾವನಿ ಮಂದಿರದಿಂದ ಎತ್ತಿನ ಬಂಡಿಯಲ್ಲಿ ಸಾನ್ನಿಧ್ಯವಹಿಸಿದ ಭವಾನಿ ಮಾತಾಳನ್ನು ಹೂಗಳಿಂದ ಅಲಂಕರಿಸಲಾಗಿದೆ. ಮಂಗಲಪೇಟ ಮೂಲಕ ನಯಕಮಾನ್ ದಿಂದ ಪ್ರಮುಖ ಬೀದಿಗಳ ಮೂಲಕ ಪುನಃ ಮೂಲ ಭವಾನಿ ಮಂದಿರ ಮೆರವಣಿಗೆ ತಲುಪಲಿದೆ.
ಮಾರ್ಗ ಮಧ್ಯ ಭಕ್ತರು ಕಾಯಿ, ಕರ್ಪೂರ ಸೇರಿದಂತೆ ಮೆರವಣಿಗೆ ಭಾಗವಹಿಸಿದ ಮಹಿಳೆಯರಿಗೆ, ಮಕ್ಕಳಿಗೆ ಪ್ರಸಾದ ವಿತರಣೆಯು ಮಾಡುತ್ತಿರುವದು ಕಂಡು ಬಂದಿತು.
ನಾನಾ ವಾದ್ಯಗಳ ನಿನಾದಲ್ಲಿ ಭಕ್ತರು ಹೆಜ್ಜೆ ಹಾಕುವ ಮೂಲಕ ತಾಯಿ ಭವಾನಿ ಮಾರಾ ಹೆಸರಲಿ ಜಯಘೋಷ ಮೊಳಗುತ್ತಿದ್ದವು. ಅಲ್ಲದೆ ಇದೇ ವೇಳೆ ಹಲವಾರು ಜನರಲ್ಲಿ ದೇವಿ ಮೈಯಲ್ಲಿ ಆಗಮಿಸಿದ್ದರಿಂದ ಮೈಮರೆತು ವಿಚಿತ್ರ ಧ್ವನಿಯಲಿ ಹುಃಕರಿಸುತ್ತಾ ಕುಣಿಯ ಹತ್ತಿದರು.
ಈ ವೇಳೆ ಭವಾನಿ ಮಾತಾ ಹೆಸರಲಿ ಭಂಡಾರ ಹಾಗೂ ನಿಂಬೆ ಹಣ್ಣು ಇಳಿಸಿದ ತಕ್ಷ ಅರಿವಿಗೆ ಬರುತ್ತಿರುವದು ಕಂಡಿತು. ಭಕ್ತರು ಒಟ್ಟಾರೆ ಮಾ.ಶೇರಾವಲಿಯನ್ನು ವಿಜೃಂಭಣೆಯಾಗಿ ಮೆರೆಸುತ್ತಿರುವದು ಕಣ್ತುಂಬಿಸಿಕೊಂಡ ಹಲವರು ಪ್ರಾರ್ಥನೆ ಸಲ್ಲಿಸಿದರು.
ಮಂದಿರದಲ್ಲಿ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಗರ ಪ್ರಮುಖ ಬೀದಿಗಳ ಮೂಲಕ ಭವಾನಿ ದೇವಿ ಮೆರವಣಿಗೆ ಅದ್ದೂರಿಯಾಗಿ ಹೊರಟಿರುವದು ಕಂಡು ಬಂದಿತು. ಮಂಗಳಮುಖಿಯರು ಸುಸೂತ್ರವಾಗಿ ಸಿದ್ಧವಾಗಿ ದೇವಿ ಉತ್ಸವದಲ್ಲಿ ಭಾಗವಹಿಸಿ ಭಕ್ತಾಧಿಗಳಿಗೆ ಭಂಡಾರ ಹಚ್ಚುತ್ತಿದ್ದರು..
ರವಿವಾರ ಬೆಳಗ್ಗೆ 12 ಗಂಟೆಗೆ ಮೆರವಣಿಗೆ ಹೊರಟಿದ್ದು, ಸೋಮವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಮೂಲ ಮಂದಿರ ತಲುಪಲಿದೆ ಎಂದು ಭಕ್ತ ಮಂಡಳಿ ತಿಳಿಸಿದೆ.