ಅಮೇರಿಕಾಕ್ಕೆ ಹಿಮಾಘಾತಃ ಹನಿ ನೀರಿಗೂ ಪರದಾಟ
ಅಮೇರಿಕಾಕ್ಕೆ ಹಿಮಾಘಾತಃ ಹನಿ ನೀರಿಗೂ ಪರದಾಟ
ಅಮೇರಿಕಾಃ ಪ್ರಕೃತಿಯಲ್ಲಿ ಭಾರಿ ಬದಲಾವಣೆ ಆದ ಪರಿಣಾಮ ಅಮೇರಿಕಾದ ಹಲವಾರು ರಾಜ್ಯಗಳು ಹಿಮಾಘಾತಕ್ಕೆ ತತ್ತರಿಸಿ ಹೋಗಿವೆ.
ಟಾಕ್ಸಸ್ ನಗರ ಸೇರಿದಂತೆ ಹಲವು ನಗರಗಳು ಹಿಮಮಯವಾಗಿವೆ. ಹೀಗಾಗಿ ಹನಿ ನೀರು ತರಲು ಜನ ಕೀಲೋ ಮೀಟರ್ ಗಟ್ಟಲೇ ನಡೆದುಕೊಂಡು ಹೋಗಬೇಕಿದೆ. ಸಾಲಾಗಿ ನಿಂತು ಕೊಡ ನೀರಿಗಾಗಿ ಕಾಯಬೇಕಿದೆ. ನಲ್ಲಿಯಲ್ಲಿ ಹಿಮಗಟ್ಟಿ ನೀರು ಬರುವ ನಲ್ಲಿ ಸಿಡಿದು ಹೋಗಿವೆ.
ರಸ್ತೆಯೆಲ್ಲ ಹಿಮದಿಂದ ಆವೃತವಾಗಿವೆ. ಗಿಡ ಮರ ಮನೆಗಳ ಮೇಲೂ ಹಿಮವೋ ಹಿಮ ಸಂಗ್ರಹಗೊಂಡಿದ್ದು ಜನ ಆಹಾರ ಸೇವನೆಗೂ ಕುತ್ತು ಬಂದಿದೆ.
ಮೈನಿಸ್ ಡಿಗ್ರಿ ಛಳಿಯಲಿ 50 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಿಮದಿಂದಾಗಿ ನಗರಗಳಲ್ಲಿ ನೀರೂ ಇಲ್ಲ ವಿದ್ಯುತ್ ಇಲ್ಲ. ಹಿಮ ಚಂಡ ಮಾರುತಕ್ಕೆ ಜನ ಬಲಿಯಾಗುತ್ತಿದ್ದಾರೆ.
ಹವಾಮಾನ ಬದಲಾವಣೆಯಿಂದ ಅಮೇರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಒಂದಿಲೊಂದು ಪರಿಣಾಮ ಎದುರಿಸುವಂತಾಗಿದೆ. ಪ್ರಕೃತಿಯನ್ನೆ ಶೋಷಣೆ ಮಾಡಿದ ಪರಿಣಾಮ ಜನ ಇಂತಹ ಸ್ಥಿತಿ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡುತ್ತಿದ್ದಾರೆ. ಹವಾಮಾನ ವೈಪರೀತ್ಯಗಳಿಂದ ಪ್ರಕೃತಿ ವಿಕೋಪಗಳು ನಡೆಯುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ.