ಪ್ರಮುಖ ಸುದ್ದಿ
ಕುರುಬ ಸಮಾಜದ ಯುವಕರು ರಕ್ತ ಸುರಿಸೋಕು ಸಿದ್ಧ- ಕಾಂತೇಶ ಈಶ್ವರಪ್ಪ
ಕುರುಬ ಸಮಾಜದ ಯುವಕರು ರಕ್ತ ಸುರಿಸೋಕು ಸಿದ್ಧ- ಕಾಂತೇಶ ಈಶ್ವರಪ್ಪ
ಬಾಗಲಕೋಟಃ ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರ್ಪಡೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಕುರುಬ ಸಮಾಜದ ಯುವ ಸಮೂಹ ರಕ್ತ ಹರಿಸುವ ಮೂಲಕ ಹೋರಾಟಕ್ಕೆ ನುಗ್ಗಲಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಮಾಜದ ಯುವ ನಾಯಕ ಕಾಂತೇಶ ಈಶ್ವರಪ್ಪ ಎಚ್ಚರಿಕೆ ನೀಡಿದರು.
ನಗರದಲ್ಲಿ ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರಿಸಬೇಕೆಂದು ಹಮ್ಮಿಕೊಂಡ ಬಹು ದೊಡ್ಡ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜ ಉತ್ತಮ ಚಿಂತನ, ಆಲೋಚನೆ ಮಾಡಿಯೇ ಎಸ್.ಟಿ. ಮೀಸಲಾತಿ ಪಡೆಯಲು ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಗೆನಲೆ ಸ್ವಾಮೀಜಿ, ಕೆ.ಎಸ್.ಈಶ್ವರಪ್ಪ ಸೇರಿದಂತೆ ಸಮಾಜದ ಪ್ರಮುಖ ನಾಯಕರು ಭಾಗವಹಿಸಿದ್ದರು.