ಪ್ರಮುಖ ಸುದ್ದಿ

ಶಹಾಪುರ ಪಾಶಾಣ ಪ್ರಕರಣಃ ಅರುಣಿ ಮೇಲೆ ಹಲ್ಲೆ ಖಂಡನೀಯ – ಅಮೀನರಡ್ಡಿ ಪಾಟೀಲ್

ಶಾಸಕರ ಸಹೋದರರಿಂದ ದೌರ್ಜನ್ಯ – ಅಮೀನರಡ್ಡಿ ಪಾಟೀಲ್

ಪಾಶಾಣ ಪ್ರಕರಣಃರೋಪಿ ಮೇಲೆ ಹಲ್ಲೆ ಖಂಡನೀಯ

ಶಾಸಕರ ಸಹೋದರರಿಂದ ದರ್ಪ, ದೌರ್ಜನ್ಯ – ಅಮೀನರಡ್ಡಿ ಪಾಟೀಲ್ ಹೇಳಿಕೆ

yadgiri, ಶಹಾಪುರಃ ಮೊನ್ನೆ ನಗರದಲ್ಲಿ ನಡೆದ ಪಾಶಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍ಟಿಐ ಕಾರ್ಯಕರ್ತ ಬಸವರಾಜ ಅರುಣಿ ಮೇಲೆ ಶಾಸಕ ದರ್ಶನಾಪುರರ ಸಹೋದರ ಸಂಬಂಧಿ ವಿಶ್ವನಾಥರಡ್ಡಿ ದರ್ಶನಾಪುರ ಹಾಗೂ ಆತನ ಸಹೋದರರು ಅಮಾನುಷವಾಗಿ, ಆತನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವದು ಅತ್ಯಂತ ಖಂಡನೀಯ ಇಡಿ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು ಎಂದು ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ತಿಳಿಸಿದರು.

ನಗರದ ಅವರ ಸ್ವಂತ ಮನೆಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಸಂಜೆ ಈ ಘಟನೆ ನಡೆದಿದೆ. ಮಂಗಳವಾರ ನನಗೆ ಗೊತ್ತಾಗಿದ್ದು, ಆರ್‍ಟಿಐ ಕಾರ್ಯಕರ್ತ ಬಸವರಾಜ ಅರುಣಿ ಯವರನ್ನು ತಮ್ಮ ಮನೆಗೆ ಮಾತುಕತೆಗೆ ಕರೆಸಿ ಸಿಹಿ ತಿಂಡಿಯಲ್ಲಿ ವಿಷ ಬೆರೆಸಿದ್ದಾನೆಂದು ಆರೋಪಿಸಿ ಅಮಾನುಷವಾಗಿ ಕೃತ್ಯ ಎಸಗಿದ್ದು ಸರಿಯಲ್ಲ.

ಅರುಣಿ ತಮ್ಮ ಆರ್‍ಟಿಐ ಅಡಿ ಅರ್ಜಿ ಸಲ್ಲಿಸಿ ತಮಗೆ ಬ್ಲ್ಯಾಕ್ ಮೇಲ್ ಮಾಡಿದ್ದರೆ ಕಾನೂನಿನ್ವಯ ವಂಚನೆ ಪ್ರಕರಣ ದಾಖಲಿಸಬೇಕಿತ್ತು. ಅದು ಬಿಟ್ಟು ರಾಜಿ ಸಂಧಾನಕ್ಕೆಂದು ಕರೆದು ಈ ರೀತಿ ಮಾಡುವದು ತರವಲ್ಲ. ಶಾಸಕರ ಸಹೋದರರು ಅಧಿಕಾರದ ದರ್ಪ ತೋರಿದ್ದು ಎದ್ದು ಕಾಣುತ್ತಿದೆ ಎಂದರು.

ಸ್ವೀಟ್ ಬಾಕ್ಸ್ ನಲ್ಲಿ ವಿಷ ಬೆರಕೆ ಮಾಡಿದ್ದಾನ ಹೋಗ್ಲಿ ಆಗಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ಪ್ರಕರಣ ದಾಖಲಿಸಬೇಕಿತ್ತು. ಮೂರು ದಿನ ಆದರೂ ಪ್ರಕರಣ ಏಕೆ ದಾಖಲಿಸಲಿಲ್ಲ. ನಾನು ಸುದ್ದಿಗೋಷ್ಠಿ ಕರೆದಿದ್ದೇನೆ ಅಂದ ತಕ್ಷಣ ತಡವರಿಸಿ ಠಾಣೆಗೆ ಹೋಗಿ ಪ್ರಕರಣ ದಾಖಲಿಸಲು ಮುಂದಾಗಿದ್ದೀರಿ ಎಂದು ಜರಿದರು.

ಪಾಶಾಣ ಪ್ರಕರಣ ಕುರಿತು ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆ ಹೊರ ಬರಲಿ. ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವರಾಜ ವಿಭೂತಿಹಳ್ಳಿ, ಆರೋಪಿ ಬಸವರಾಜ ಅರುಣಿ ಇದ್ದರು.

ನಾನು ಸ್ವೀಟ್ ಬಾಕ್ಸೇ ತಂದಿಲ್ಲ ವಿಷ ಹೇಗೆ ಹಾಕಲಿ – ಅರುಣಿ ಸ್ಪಷ್ಟನೆ

ಶಹಾಪುರಃ ಸುದ್ದಿಗೋಷ್ಠಿಯಲ್ಲಿ ಹಾಜರಾಗಿದ್ದ ಬಸವರಾಜ ಅರುಣಿ ಮಾತನಾಡಿ, ನಾನು ಯಾವುದೇ ಸಿಹಿ ತಿಂಡಿ ತೆಗೆದುಕೊಂಡು ಹೋಗಿಲ್ಲ. ವಿಷ ಎಲ್ಲಿಂದ ಹಾಕಲಿ, ಇದೆಲ್ಲ ವಿಶ್ವನಾಥ ರಡ್ಡಿ ದರ್ಶನಾಪುರ ಸೃಷ್ಟಿ ಮಾಡಿರುವದು. ರಾಜಿ ಸಂಧಾನಕ್ಕೆಂದು ಅವರ ಮನೆಗೆ ಕರೆದು ನನ್ನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ವಿಶ್ವನಾಥರಡ್ಡಿ ಮತ್ತು ಅವರ ಸಹೋದರರು ಹಾಗೂ ಅವರೊಂದಿಗೆ ಇದ್ದ ಇನ್ನಿತರರು ನನ್ನ ಬಟ್ಟೆ ಬಿಚ್ಚಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿಂದ, ಕೈಯಿಂದ ಮನಬಂದಂತೆ ಥಳಿಸಿದ್ದಾರೆ. ನಾನು ಯಾವುದೇ ಸ್ವೀಟ್ ತೆಗೆದುಕೊಂಡು ಹೋಗಿಲ್ಲ. ವಿಷ ಎಲ್ಲಿಂದ ಬೆರೆಸಲಿ ಎಂದರು.

ಯಾದಗಿರಿ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಪ್ರವರ್ತಕ ಹುದ್ದೆಗೆ ಮೊದಲು ನಾನು ಆಕಾಂಕ್ಷಿಯಾಗಿ ಸಂಬಂಧಿಸಿದ ಎಲ್ಲಾ ಕಾಗದ ಪತ್ರಗಳನ್ನು ತಯಾರಿಸಿ ಅರ್ಜಿ ಸಲ್ಲಿಸಿದ್ದೆ, ಆಗ ಮಧ್ಯದಲ್ಲಿ ಆಗಮಿಸಿದ ವಿಶ್ವನಾಥರಡ್ಡಿ ಅಧಿಕಾರಿಗಳನ್ನು ಕಟ್ಟಿಕೊಂಡು ನನ್ನನ್ನು ಅದರಿಂದ ಕಿಕ್ ಔಟ್ ಮಾಡಿಸಿ ತಾನೂ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಪ್ರವರ್ತಕರಾದರು.

ಆ ಕುರಿತು ಸಮಗ್ರ ದಾಖಲೆ ತೆಗೆದುಕೊಂಡು ನಾನು ಕಾನೂನು ಹೋರಾಟ ನಡೆಸಿದೆ. ಸದ್ಯ ನ್ಯಾಯಾಲಯದಲ್ಲಿ ನನಗೆ ಜಯ ದೊರೆಯುವ ಸಾಧ್ಯತೆ ಇದೆ. ಆ ಕಾರಣಕ್ಕೆ ದ್ವೇಷದಿಂದ ಈ ರೀತಿ ಮಾಡಿದ್ದಾರೆ ಎಂದು ದೂರಿದರು. ಬಿಸಿಎಂ ಆಫೀಸರ್ ಶರಣಪ್ಪ ಬಳಬಟ್ಟಿ, ನಾನು ಮಾಹಿತಿ ಅಡಿ ಸಲ್ಲಿಸಿದ ಅರ್ಜಿಗನುಗುಣವಾಗಿ ಮಾಹಿತಿ ನೀಡದೆ, ವಿಶ್ವನಾಥರಡ್ಡಿ ಅವರೊಂದಿಗೆ ಮಾತುಕತೆ ನಡೆಸಿ ಆ ನಂತರ ನಿಮಗೆ ಮಾಹಿತಿ ಪ್ರತಿಗಳನ್ನು ಒದಗಿಸುವೆ ಎಂದು ವಿಶ್ವನಾಥರಡ್ಡಿ ಮನೆಗೆ ಕರೆದು ಹಲ್ಲೆ ನಡೆಯುವಾಗ ಅವರು ಭಾಗಿಯಾಗಿದ್ದರು ಎಂದರು. ಗುಂಡಗುರ್ತಿ ವಿಜಯಕುಮಾರ ಅವರು ರಾಜಿ ಮಾಡಿಸುವದಾಗಿ ನನ್ನನ್ನು ಅವರ ಮೆನೆಗೆ ಕರೆದೊಯ್ದರು ಎಂದು ವಿವರಿಸಿದರು.

ಪಾಶಾಣ ಪ್ರಕರಣಃ ಎರಡು ಪತ್ಯೇಕ ಪ್ರಕರಣ ದಾಖಲು

ಮೊನ್ನೆಯಿಂದ ನಡೆದ ಪಾಶಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಯಿಂದ ಆರೋಪ ಪ್ರತ್ಯಾರೋಪಗಳು ನಡೆದು ಬುಧವಾರ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ವಿಶ್ವನಾಥರಡ್ಡಿ ಅವರು, ಸಿಹಿತಿಂಡಿ ಯಲ್ಲಿ ವಿಷ ಬೆರೆಸಿ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆಂದು ಆರ್‍ಟಿಐ ಕಾರ್ಯಕರ್ತ ಬಸವರಾಜ ಅರುಣಿ ವಿರುದ್ಧ ವಿವರವಾಗಿ ದೂರಿನಲ್ಲಿ ತಿಳಿಸಿ ಐಪಿಸಿ ಕಲಂನಡಿ 307, 506 ಅಡಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

ಇದೇ ವೇಳೆ ಬುಧವಾರವೇ ಬಸವರಾಜ ಅರುಣಿ ಅವರು, ಮನೆಗೆ ಕರೆಸಿಕೊಂಡು ತಮ್ಮ ಮೇಲೆ ಅಮಾನುಷವಾಗಿ ವಿಶ್ವನಾಥ ರಡ್ಡಿ ದರ್ಶನಾಪುರ ಹಾಗೂ ಸಹೋದರರು ಮತ್ತು ಇನ್ನಿತರರು ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿದ್ದಾರೆಂದು ಪ್ರಕರಣ ದಾಖಲಿಸಿದ್ದಾರೆ  ಐಪಿಸಿ ಕಲಂ‌ 143, 147, 323, 307, 504, 506 ಜತೆ 104 ಅನ್ವಯ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ‌ಕೈಗೊಳ್ಳಲಾಗಿದೆ ಎಂದು ಪಿಐ ಚನ್ನಯ್ಯ ಹಿರೇಮಠ  ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button