ಪ್ರಮುಖ ಸುದ್ದಿ
ಅಮಿತ್ ಶಾ ಬಂಗಾಲಿ ಭಾಷೆ ಕಲಿಯುತ್ತಿದ್ದಾರೆ..ಯಾಕೆ ಗೊತ್ತಾ.?
ಅಮಿತ್ ಶಾ ಬಾಂಗ್ಲಾ ಭಾಷೆ ಕಲಿಕೆ ಚುನಾವಣೆ ಪೂರ್ವ ತಯ್ಯಾರಿ
ನವದೆಹಲಿ: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು 2021 ರಲ್ಲಿ ನಡೆಯುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಬಂಗಾಳಿ ಭಾಷೆ ಕಲಿಯುವ ಮೂಲಕ ಭರ್ಜರಿ ತಯಾರಿ ಆರಂಭಿಸಿದ್ದಾರೆ.
ಮತದಾನದ ಕಾರ್ಯತಂತ್ರಗಳನ್ನು ಮಾಡುವಾಗ ಭಾಷೆ ತೊಡಕಾಗದಿರಲಿ ಎಂಬ ಉದ್ದೇಶಕ್ಕೆ ಬಾಂಗ್ಲಾ ಭಾಷೆ ಕಲಿಯುವ ಉದ್ದೇಶವನ್ನು ಷಾ ಹೊಂದಿದ್ದಾರೆ ಎನ್ನಲಾಗಿದೆ.
ಬಂಗಾಲಿ ಜನರ ಜೊತೆಗೆ ಉತ್ತಮ ಸಂಪರ್ಕ ಸಾಧಿಸಲು ಮತ್ತು ಮುಖ್ಯವಾಗಿ ಬಾಂಗ್ಲಾ ಚುನಾವಣೆ ವೇಳೆ ರಾಜ್ಯದಲ್ಲಿ ಬಂಗಾಲಿ ಭಾಷೆ ಮೂಲಕ ತಮ್ಮ ಪ್ರಚಾರದ ಭಾಷಣವನ್ನು ಪ್ರಾರಂಭಿಸಲು ಅವರು ಯೋಜಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಅವರು ಈಗಾಗಲೇ ಬಂಗಾಲಿ ಶಿಕ್ಷಕರನ್ನು ಸಹ ನೇಮಿಸಿಕೊಂಡಿದ್ದಾರೆ ಎನ್ನಲಾಗಿದೆ.