ನಟಿ ಐಶ್ವರ್ಯ ರೈಗೆ ಉಸಿರಾಟ ತೊಂದರೆ ಆಸ್ಪತ್ರೆಗೆ ದಾಖಲು
ಕೊರೊನಾ ಸುಳಿಗೆ ಸಿಲುಕಿದ ನಟ ಅಮಿತಾಬ್ ಕುಟುಂಬ
ಮುಂಬೈಃ ನಟಿ ಐಶ್ವರ್ಯ ಮತ್ತು ಮಗಳು ಆರಾಧ್ಯ ಅವರಿಗೂ ಕೊರೊನಾ ಪಾಸಿಟಿವ್ ಬಂದಿರುವ ಕಾರಣ, ನಾನಾವತಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ನಟ ಅಮಿತಾಬ್ ಹಾಗೂ ಅಭಿಷೇಕ್ ಅವರು ಈಗಾಗಲೇ ಇದೇ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೇನು ವಾರದಲ್ಲಿ ಗುಣಮುಖರಾಗಿ ಬಿಡುಗಡೆಯಾಗಲಿದ್ದಾರೆ.
ಆದರೆ ಇದೇ ವೇಳೆಗೆ ಐಶ್ವರ್ಯ ರೈ ಅವರಿಗೆ ಉಸಿರಾಟ ತೊಂದರೆ ಕಂಡಿದ್ದರಿಂದ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ.
ಕೊರೊನಾ ಲಕ್ಷಣಗಳು ಕಂಡಿರದ ಪರಿಣಾಮ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದ ಐಶ್ವರ್ಯ ರೈ ಇದೀಗ ಉಸಿರಾಟ ತೊಂದರೆ ಕಂಡು ಬಂದ ಹಿನ್ನೆಲೆ ಮಗಳು ಆರಾಧ್ಯ ಸೇರಿದಂತೆ ನಟಿ ಐಶ್ವರ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಅಪಾರ ಅಭಿಮಾನಿ ಬಳಗ ಹೊಂದಿದ್ದ ಈ ಕುಟುಂಬ ಕೊರೊನಾ ಕರಿ ನೆರಳಿನಿಂದ ಬೇಗ ಹೊರ ಬರಲಿ ಎಂದು ಎಲ್ಲರು ಆಶಿಸುತ್ತಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚನ ಅಮಿತಾಬ್ ಕುಟಬ ಶೀಘ್ರ ಗುಣಮುಖವಾಗಲಿ ಎಂದು ಹರಕೆ ಹೊತ್ತಿದ್ದಾರೆ. ಕೆಲವರು ನಿತ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.