Homeಪ್ರಮುಖ ಸುದ್ದಿ
ಅಮುಲ್ ಹಾಲಿನ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ
ಅಹಮ್ಮದಾಬಾದ್: ಅಮುಲ್ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲಾಗಿದ್ದು ಜನಸಾಮಾನ್ಯನ ಜೇಬಿಗೆ ಹೊಡೆತಬಿದ್ದಿದೆ. ಅಮುಲ್ ಗೋಲ್ಡ್, ಅಮುಲ್ ಶಕ್ತಿ, ಅಮುಲ್ ಟೀ ಸ್ಪೆಷಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲಾಗಿದೆ.
ಹಾಲಿನ ಹೊಸ ಬೆಲೆ ಸೋಮವಾರ ಬೆಳಗ್ಗೆಯಿಂದಲೇ ಅನ್ವಯವಾಗಲಿದೆ. ಈ ಹಿಂದೆ 2023 ರ ಫೆಬ್ರವರಿಯಲ್ಲಿ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಹಾಲಿನ ದರವನ್ನು ಹೆಚ್ಚಿಸಿತ್ತು. ಈಗ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ ಮತ್ತೊಂದು ದರ ಪರಿಷ್ಕರಣೆಯಾಗಿದೆ. ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳದ ದೃಷ್ಟಿಯಿಂದ ಸೋಮವಾರದಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆ ಮಾಡಲಾಗಿದೆ.