ಅಂಜನಾದ್ರಿ ಬೆಟ್ಟದ ಆಂಜನೇಯ ದರ್ಶನ ಸಮಯ ಮತ್ತೆ ಬದಲಾವಣೆ.!
ಅಂಜನಾದ್ರಿ ಬೆಟ್ಟದಡಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಸಮಯ ಬದಲಾಗಿತ್ತಾ.?
ಅಂಜನಾದ್ರಿ ಬೆಟ್ಟದ ಆಂಜನೇಯ ದರ್ಶನ ಸಮಯ ಮತ್ತೆ ಬದಲಾವಣೆ.!
ಅಂಜನಾದ್ರಿ ಬೆಟ್ಟದಡಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಸಮಯ ಬದಲಾಗಿತ್ತಾ.?
ಕೊಪ್ಪಳಃ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಬರುವ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಪುರಾಣಗಳಲ್ಲಿ ಉಲ್ಲೇಖಿತ ಆಂಜನೇಯ ಸ್ವಾಮಿಯ ಜನ್ಮ ಸ್ಥಳ ಪುಣ್ಯ ಕ್ಷೇತ್ರ ದರ್ಶನಕ್ಕೆ ಕಳೆದ 20 ದಿನಗಳಿಂದ ಸಮಯ ಬದಲಾವಣೆ ಮಾಡಲಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಮದ್ಯಾಹ್ನ 3 ಗಂಟೆಗೆ ದರ್ಶನ ಸಮಯ ನಿಗದಿಗೊಳಿಸಲಾಗಿತ್ತು.
ಹೀಗಾಗಿ ಮದ್ಯಾಹ್ನ 3 ಗಂಟೆಯ ನಂತರ ಬಂದ ಭಕ್ತರಿಗೆ ಅಂಜನಾದ್ರಿ ಬೆಟ್ಡ ಏರಲು ಅವಕಾಶ ನಿರಾಕರಿಸಲಾಗಿತ್ತು. ಹೀಗಾಗಿ ಸಾಕಷ್ಟು ಜನರಿಗೆ ಆಂಜನೇಯ ಸ್ವಾಮಿಯ ಪುಣ್ಯ ಸ್ಥಳ ದರ್ಶನ ಮಾಡದೆ ನಿರಾಸೆಯಿಂದ ವಾಪಾಸ್ ಆಗಿದ್ದುಂಟು.
ಅಂಜನಾದ್ರಿ ಬೆಟ್ಟದಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾಗಳಲ್ಲಿ ಚಿರತೆ ಮತ್ತು ಕರಡಿ ಪ್ರತ್ಯಕ್ಷ ವಾಗಿರುವ ಹಿನ್ನೆಲೆ ಸಮಯ ಬದಲಾವಣೆ ಮಾಡಲಾಗಿತ್ತು.
ಸಂಜೆ ಮತ್ತು ಬೆಳಗಿನ ಜಾವದಲ್ಲಿಯೇ ಪ್ರಾಣಿಗಳು ಪ್ರತ್ಯಕ್ಷವಾಗಿರುವ ಹಿನ್ನೆಲೆ ದೇವಸ್ಥಾನದ ಆಡಳಿತ ಮಂಡಳಿ ಆ ಸಮಯದಲ್ಲಿಯೇ ದರ್ಶನ ಭಾಗ್ಯ ಅಲಭ್ಯಗೊಳಿಸಿದ್ದರು.
ಇದೀಗ ಮತ್ತೇ ಅಂಜನಾದ್ರಿ ಆಂಜನೇಯಸ್ವಾಮಿ ದರ್ಶನ ಬೆಳಗ್ಗೆ 8 ಗಂಟೆಯಿಂದ ಸಂಜೆ 5-30 ರವರೆಗೆ ನಿಗದಿಗೊಳಿಸಲಾಗಿದೆ. ಸಂಜೆ ದರ್ಶನಕ್ಕೆ ತೆರಳಿದವರು ಆದಷ್ಟು ಹೊತ್ತು ಮುಳುಗುವ ಮುಂಚೆ ಬೆಟ್ಟದಿಂದ ಕೆಳಗೆ ಇಳಿಯಲು ಆಡಳಿತ ಮಂಡಳಿ ಮನವಿ ಮಾಡಿದೆ.