ಪ್ರಮುಖ ಸುದ್ದಿ
ಅಣ್ಣಾ ಹಜಾರೆಗೆ ಎದೆ ನೋವು ಆಸ್ಪತ್ರೆಗೆ ದಾಖಲು
ಅಣ್ಣಾ ಹಜಾರೆಗೆ ಎದೆ ನೋವು ಆಸ್ಪತ್ರೆಗೆ ದಾಖಲು
ಮುಂಬೈಃ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ (ಕಿಶನ್ ಬಾಬುರಾವ್ ಹಜಾರೆ) ಅವರಿಗೆ ಗುರುವಾರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಪುಣೆಯ ರೂಬಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಅವರನ್ನು ನಿಗಾ ಘಟಕದಲ್ಲಿ ಇರಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ಅವಧೂತ ಬೋಡಮ್ ವಾಡ್ ತಿಳಿಸಿದ್ದಾರೆ.
ಹಜಾರೆ ಅವರ ಆರೋಗ್ಯ ಸುಧಾರಿಸಲಿ ಎಂದು ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಸದ್ಯ ಅವರು ಚಿಕಿತ್ಸೆಗೆ ಸ್ಪಂಧನೆ ನೀಡುತ್ತಿದ್ದು, ಯಾವುದೇ ಅಪಾಯವಿಲ್ಲ ಎನ್ನಲಾಗಿದೆ.