ಪ್ರಮುಖ ಸುದ್ದಿ
ನಾನು ರಾಷ್ಟ್ರೀಯವಾದಿ, ಬಿಜೆಪಿ ರಾಷ್ಟ್ರೀಯವಾದಿ – ಅಣ್ಣಾಮಲೈ
ನಾನು ರಾಷ್ಟ್ರೀಯವಾದಿ, ಬಿಜೆಪಿ ರಾಷ್ಟ್ರೀಯವಾದಿ – ಅಣ್ಣಾಮಲೈ
ದೆಹಲಿಃ ನಾನು ರಾಷ್ಟ್ರೀಯವಾದಿಯಾಗಿದ್ದು ಬಿಜೆಪಿಯು ರಾಷ್ಟ್ರೀಯವಾದಿ ಪಕ್ಷವಾಗಿದೆ. ಬಿಜೆಪಿ ಸೆರ್ಪಡೆಯಿಂದ ತಮಿಳುನಾಡಿಗೆ ಒಂದು ಹೊಸ ದಿಕ್ಸೂಚಿಯಾಗಲಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಇಂದು 11 ಗಂಟೆ ಸುಮಾರಿಗೆ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಲಿರುವ ಅಣ್ಣಾಮಲೈ ಅವರು, ಕರ್ನಾಟಕದಲ್ಲಿ ಡಿಸಿಪಿ, ಎಸ್.ಪಿ.ಯಾಗಿ ಕರ್ತವ್ಯನಿರ್ವಹಿಸಿ ಖಡಕ್ ಆಫೀಸರ್ ಎಂದು ಹೆಸರು ಮಾಡಿದವರು.
ಬಳಿಕ ಅವರು ಸ್ವಯಂ ನಿವೃತ್ತಿ ಪಡೆದಿದ್ದರು. ಇದೀಗ ರಾಜಕೀಯಕ್ಕೆ ಇಳಿಯಲಿದ್ದು, ತಮಿಳುನಾಡಿನಲ್ಲಿ ಹೊಸ ಶಕೆ ಆರಂಭಕ್ಕೆ ತಯ್ಯಾರಿಯಲ್ಲಿದ್ದಾರೆ ಎನ್ನಲಾಗಿದೆ.