ಪ್ರಮುಖ ಸುದ್ದಿ
ಹಿಂದೂ ನಾಯಕಿ ಅವಹೇಳನ ಆರೋಪಿ ಮೇಲೆ ಪ್ರಕರಣ ದಾಖಲು

ಭಜರಂಗದಳ ಅಧ್ಯಕ್ಷೆಗೆ ಅವಾಚ್ಯ ಶಬ್ದಗಳಿಂದ ನಿಂದನೆ: ದೂರು ದಾಖಲು
ಯಾದಗಿರಿ, ಶಹಾಪುರ: ವಾಟ್ಸಪ್ ಸ್ಟೆಟಸ್ ಮೂಲಕ ಶ್ರೀರಾಮ ಸೇನೆ ಹಾಗೂ ಭಜರಂಗದಳ ಉತ್ತರ ಕರ್ನಾಟಕ ಭಾಗದ ಮಹಿಳಾ ಘಟಕದ ಅಧ್ಯಕ್ಷೆ ಚೈತ್ರಾ ಕುಂದಾಪುರ ಅವರ ಭಾಷಣವನ್ನು ಎಡಿಟ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಶುಕ್ರವಾರ ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಹಾಪುರ ನಗರದ ಜಾವಿದ ಇಬ್ರಾಹಿಂ ನಾಲವಾರ ಆರೋಪಿಯಾಗಿದ್ದಾನೆ.
ಗುರುವಾರ ಶ್ರೀರಾಮ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಶಿರವಾಳ ಅವರು, ಆರೋಪಿ ಜಾವೀದ ತನ್ನ ವಾಟ್ಸಪ್ ಸ್ಟೆಟಸ್ ನಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿದ ವಿಡಿಯೋ ಸ್ಟೆಟೆಸ್ ಇಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಉದ್ದೇಶದಿಂದ ಬುದ್ದಿಪೂರ್ವಕವಾಗಿ ವಾಟ್ಸಪ್ ಸ್ಟೆಟಸ್ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಬಗ್ಗೆ ದೂರು ದಾಖಲಿಸಿದ್ದಾರೆ.
ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.