ಶಹಾಪುರಃ ಧಾರಕಾರ ಮಳೆಗೆ ಮೈದುಂಬಿಕೊಂಡ ದಬದಭೆ ಫಾಲ್ಸ್
ಧಾರಕಾರ ಮಳೆಗೆ ಮೈದುಂಬಿಕೊಂಡ ದಬದಭೆ ಫಾಲ್ಸ್
yadgiri, ಶಹಾಪುರಃ ಶುಕ್ರವಾರ ಭಾರಿ ಮಳೆ ಸುರಿದ ಪರಿಣಾಮ ಕೆರೆ, ಹಳ್ಳಕೊಳ್ಳ ಮೈದುಂಬಿಕೊಂಡು ಸುತ್ತಲೂ ಹಚ್ಚಹಸಿರೊಡನೆ ಕಂಗೊಳಿಸುತ್ತಿದೆ. ಹೀಗಾಗಿ ಅಪಾರ ಜನಸಂಖ್ಯೆ ವೀಕ್ಷಣೆಗಾಗಿ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾರೆ.
ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಮೇಲಿನ ತಾವರೆಗೆರೆ ಮೂಲಕ ದಟ್ಟವಾಗಿ ಹರಿದು ಬರುವ ನೀರಿನಿಂದ ಬೆಟ್ಟದಡಿಯಲ್ಲಿ ಬೀಳುವ ಈ ನೀರಿಗೆ ದಬದಭೆ ಫಾಲ್ಸ್ ಎಂದು ಕರೆಯಲಾಗುತ್ತಿದೆ.
ಜೋರಾಗಿ ಮಳೆ ಬಂದಾಗ ಜನ್ಮ ತಾಳುವ ಈ ದಬದಭೆ ಪಾಲ್ಸ್ ಇಲ್ಲಿನ ಜನರ ಪಾಲಿಗೆ ಖುಷಿ ತಂದೊಡ್ಡವ ಸಣ್ಣ ಜೋಗದಂತಿದೆ. ಸುತ್ತಲೂ ಗುಡ್ಡ ಬೆಟ್ಟವಿದ್ದು ಹಸಿರು ತುಂಬಿಕೊಂಡಿದೆ. ಹೀಗಾಗಿ ಯುವ ಸಮೂಹ ಮಳೆ ಬಂದಿತೆಂದರೆ ಇಲ್ಲಿಗೆ ಓಡುತ್ತಾರೆ. ಈಗಲೂ ಅಷ್ಟೆ ಅಪಾರ ಸಂಖ್ಯೆಯಲ್ಲಿ ಸEರಿರು ಯುವಕರು ಕೂಗು ಹರ್ಷದ್ಗೋರ ಮುಗಿಲು ಮುಟ್ಟಿದೆ.
ಆದರೆ ಒಂದಿಷ್ಟು ಮೈಮರೆತರು ನೀರಿನ ಸೆಳೆಯತಕ್ಕೆ ನೇರವಾಗಿ ಗುಡ್ಡ ಪಾತಾಳಕ್ಕೆ ಬೀಳಲಿದ್ದಾರೆ. ಹೀಗಾಗಿ ಮುಂಜಾಗೃತ ವಹಿಸುವದು ಅಗತ್ಯವಿದೆ. ಅಪಾರ ಪ್ರಮಾಣ ನೀರು ಹರಿಯುತ್ತಿರುವದರಿಂದ ಕಾಲು ಜಾರಿದರೆ ಪಾತಳವೇ ಗ್ಯಾರಂಟಿ. ಹೀಗಾಗಿ ಮಕ್ಕಳು ಯುವಕರು ಮೋಜು ಮಸ್ತಿಯಲ್ಲಿ ಮೈಮರೆತು ಪ್ರಾಣ ಕಳೆದುಕೊಳ್ಳಬಾರದೆಂಬ ಎಚ್ಚರಿಕೆ ವಹಿಸುವದು ಅಗತ್ಯ.