ಪ್ರಮುಖ ಸುದ್ದಿಸಂಸ್ಕೃತಿ

ಸಂಗೀತ ರೋಗ ನಿವಾರಣೆಗೆ ಉತ್ತಮ ಮದ್ದು – ಕಾಳಹಸ್ತೇಂದ್ರ ಶ್ರೀ

ಯುಗಾದಿ ಉತ್ಸವ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ

ಯುಗಾದಿ ಉತ್ಸವ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ

ಸಂಗೀತ ರೋಗ ನಿವಾರಣೆಗೆ ಉತ್ತಮ ಮದ್ದು – ಕಾಳಹಸ್ತೇಂದ್ರ ಶ್ರೀ

yadgiri, ಶಹಪುರಃ ಸಂಗೀತ ಹಲವಾರು ರೋಗ ನಿವಾರಣೆಗೆ ಉತ್ತಮ ಮದ್ದು ಎಂಬುದನ್ನು ವಿಜ್ಞಾನಿಗಳೇ ತಿಳಿಸಿದ್ದಾರೆ. ಅಡ್ಡ ಪರಿಣಾಮಗಳಿಲ್ಲದ ಮದ್ದು ಎಲ್ಲೂ ದೊರೆಯಲು ಸಾಧ್ಯವಿಲ್ಲ ಎಂದಾಗ, ಹಲವಾರು ಸಂಶೋಧನೆಗಳು ನಡೆದು ಸಂಗೀತದಿಂದ ಹಲವಾರು ರೋಗ ರುಜಿನಗಳನ್ನು ಗುಣಪಡಿಸುವ ಶಕ್ತಿ ಇದೆ. ಅಷ್ಟೆ ಅಲ್ಲದೆ ಸಂಗೀತ ಆಲನೆಯಿಂದ ಆಕಳು, ಎಮ್ಮೆಗಳು ಹೆಚ್ಚಿನ ಹಾಲು ನೀಡುತ್ತವೆ ಎಂಬ ಸತ್ಯವು ಹೊರ ಬಂದಿದೆ ಎಂದು ಏಕದಂಡಿಗಿ ಮಠದ ಪೀಠಾಧಿಪತಿಗಳಾದ ಶ್ರೀಕಾಳಹಸ್ತೇಂದ್ರ ಸ್ವಾಮೀಜಿ ತಿಳಿಸಿದರು.

ವೆಂಕಟೇಶ್ವರ ನಗರದ ಬಲಭೀಮೇಶ್ವರ ಮಂದಿರದ ಆವರಣದಲ್ಲಿ ಶ್ರೀ ರಕ್ಷಾ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆಯ 3 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಯುಗಾದಿ ಉತ್ಸವ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತ ಎಲ್ಲರಿಗೂ ಒಲಿಯುವಂತದಲ್ಲ. ಅದಕ್ಕೆ ಸರಸ್ವತಿ ಮಾತೆಯ ಆಶೀರ್ವಾದ ಪಡೆದು ಬಂದಿರಬೇಕಾಗುತ್ತದೆ. ಕೆಲವರಿಗೆ ದೈವದತ್ತವಾಗಿ ಸಂಗೀತ ಒಲಿದರೆ, ಇನ್ನೂ ಕೆಲವರು ಅಭ್ಯಾಸ ಮಾಡುವ ಮೂಲಕ ಸಂಗೀತವನ್ನು ಕಲಿತಿದ್ದಾರೆ. ನಗರದಲ್ಲಿ ಶ್ರೀ ರಕ್ಷಾ ಸಂಸ್ಥೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಪ್ರತಿಭಾವಂತ ಸಂಗೀತ ಇತರೆ ಕಲಾವಿದರನ್ನು ಗುರುತಿಸುವ ಕೆಲಸ ಮಾಡುತ್ತಿರುವದು ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವದು ಶ್ಲಾಘನೀಯ ಎಂದರು.

ಚರಬಸವೇಶ್ವರ ಗದ್ದುಗೆಯ ಡಾ.ಶರಣು ಗದ್ದುಗೆ ಮಾತನಾಡಿ, ಶ್ರೀರಕ್ಷಾ ಸಂಸ್ಥೆ ತಾಲೂಕಿನ ಸಂಗೀತ, ಕಲಾವಿದರನ್ನು ಗುರುತಿಸಿ ಅವಕಾಶ ಕಲ್ಪಿಸುವ ಮೂಲಕ ಅವರ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಮಾಡುತ್ತಿದೆ. ಇದು ಸಗರನಾಡಿಗೆ ಕೀರ್ತಿ ತರುವಂತದ್ದು, ಉತ್ತಮ ಸಂಗೀತ ಬಳಗವನ್ನು ಈ ಸಂಸ್ಥೆ ಹೊಂದಿರುವದು ಹೆಮ್ಮೆಯ ವಿಷಯ. ಮುಂದೆ ಶ್ರೀರಕ್ಷಾ ಸಂಸ್ಥೆ ಹೆಮ್ಮರವಾಗಿ ನೂರಾರು ಕಲಾವಿದರನ್ನು ಪೋಷಿಸುವ ಪ್ರೊತ್ಸಾಹಿಸುವ ಅಗಾಧ ಶಕ್ತಿಯನ್ನು ಹೊಂದಲಿ ಎಂದು ಆಶಿಸಿ ಕನ್ನಡ ಗೀತೆಯೊಂದನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ರಂಜಿಸಿದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಗುರುನಾಥರಡ್ಡಿ ಪಾಟೀಲ್, ಯೋಗ ಶಿಕ್ಷಕ ರಾಘವೇಂದ್ರ ಪತ್ತಾರ, ಸಮಾಜ ಸೇವಕ ಅರವಿಂದ ಉಪ್ಪಿನ್, ವೆಂಕಟೇಶ ಕಲಕಂಬ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಉಪಾಧ್ಯಕ್ಷ ಹನುಮೇಗೌಡ ಮರಕಲ್, ಬಸವರಾಜ ಹಿರೇಮಠ, ಗುರು ಕಾಮಾ, ಅಡಿವೆಪ್ಪ ಜಾಕಾ, ರಾಜೂ ಪತ್ತಾರ, ಶಂಕರ ದುತ್ತರಗಿ, ಶರಣಪ್ಪ ಮುಂಡಾಸ ಸೇರಿದಂತೆ ಬಲಭೀಮೇಶ್ವರ ದೇವಸ್ಥಾನ ಕಮಿಟಿಯ ಕಲ್ಲಯ್ಯಸ್ವಾಮಿ ಸಾಥಖೇಡ, ಶಿವಶರಣಪ್ಪ ಕನ್ನೋಳಿ, ಶಂಕರ ಚವ್ಹಾಣ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಚಲನಚಿತ್ರ ಕಲಾವಿದ ಪ್ರಭು ಪತ್ತಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಗಣೇಶ ಪತ್ತಾರ, ಬೂದಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ ಇದ್ದರು.

Related Articles

Leave a Reply

Your email address will not be published. Required fields are marked *

Back to top button