ಪ್ರಮುಖ ಸುದ್ದಿ

ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರವಹಿಸಲು ಸಚಿವರ ತಾಕೀತು

 

ಕುಡಿಯುವ ನೀರಿನ ಸಮಸ್ಯೆಃ ಅಧಿಕಾರಿಗಳಿಗೆ ಕಂದಾಯ ಸಚಿವರ ತಾಕೀತು

ಕಲಬುರಗಿಃ ಜಿಲ್ಲೆಯಲ್ಲಿ ತೀವ್ರ ಬರ ಪರಸ್ಥಿತಿಯಿದ್ದು ಕುಡಿಯುವ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ಕಂದಾಯ ಸಚಿವರಾದ ಆರ್.‌ವಿ.ದೇಶಪಾಂಡೆ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯ ಬರಪೀಡಿತ ಅಫಜಲ್ ಪುರ ತಾಲೂಕಿನಲ್ಲಿ ಅಧ್ಯಯನ ಮಾಡಿದ ಸಚಿವರು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯ ಜನರು ಮುಗ್ಧರಿದ್ದಾರೆ. ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಅದೃಷ್ಠವಂತರು. ಸರಕಾರ ನಿಮಗೆ ಎಲ್ಲ ಸೌಲಭ್ಯ ಕೊಟ್ಟಿದೆ ಜನರ ಕೆಲಸ ಮಾಡಲು ನಿಮಗೇನು ತೊಂದರೆ‌ ಎಂದು ಪ್ರಶ್ನಿಸಿದ ಸಚಿವರು ನೀವೊಮ್ಮೆ ನಮ್ಮ ಕಡೆ ( ಕಾರವಾರ) ಬಂದು ನೋಡಿ, ನೀವು ಒಂದಿಂಚು ಆಚೀಚೆ ತಪ್ಪಿದರೂ ಕೂಡಾ ಜನರು ಮಾಧ್ಯಮಗಳಲ್ಲಿ ಸುದ್ದಿ ಹಾಕಿಸುತ್ತಾರೆ ಎಂದು ಅಧಿಕಾರಿಗಳಿಗೆ ಇಂತಹ ಜನರೊಡನೆ ಕೆಲಸ‌ ಮಾಡೋದು ನಿಮ್ಮ ಪುಣ್ಯ. ಕಾರಣ ಕರ್ತವ್ಯಲೋಪ ಎಸಗದೆ ಕಾರ್ಯ‌ನಿರ್ವಹಿಸಿ.

ಜಿಲ್ಲೆಯಲ್ಲಿ 1634 ಬಳಕೆಯಲ್ಲಿಲ್ಲದ ಬೋರ್ ವೆಲ್ ಗಳು ಎಂದು ಗುರುತಿಸಲಾಗಿತ್ತು ಅವುಗಳಲ್ಲಿ ಕೇವಲ 24 ಬೋರ್ ವೆಲ್ ಗಳನ್ನ ಮಾತ್ರ ಆಳ ಮಾಡಲಾಗಿದ್ದು ಉಳಿದ ಬೋರ್ ವೆಲ್ ಯೋಗ್ಯವಲ್ಲದವುಗಳಾಗಿವೆ ಎಂದು ಗ್ರಾಮೀಣ ಕುಡಿಯವ ನೀರು ವಿಭಾಗದ ಅಧಿಕಾರಿ ಸಚಿವರ ಗಮನಕ್ಕೆ ತಂದರು.

ಆಗ ಉತ್ತರಿಸಿದ ಸಚಿವರು ನೀವು ಹೇಳುತ್ತಿರುವ ವಿಷಯದ ಬಗ್ಗೆ ಮಾಹಿತಿಯ ಇದೆಯಾ? ಎಂದು ಪಶ್ನಿಸಿ ನೀವು ಸರಿಯಾದ ಮಾಹಿತಿ‌ ಕೊಡುತ್ತಿಲ್ಲ ಎನಿಸುತ್ತಿದೆ. ಈ ಕುರಿತು ಕೂಡಲೇ ಸಮಗ್ರ ವರದಿ‌ ಸಲ್ಲಿಸುವಂತೆ ಸೂಚಿಸಿದರು.

ಇದೇ ವೇಳೆ, ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಸಮಾಜಕಲ್ಯಾಣ ಇಲಾಖೆಯಿಂದ ಹಣ ತೆಗೆದಿರಿಸಲಾಗಿದೆ. ಆದರೆ ಯೋಜನೆಗಳು ಜಾರಿಗೊಳಿಸಲಾಗಿಲ್ಲ ಎಂದು ಶಾಸಕರಾದ ಬಸವರಾಜ ಮತ್ತಿಮೂಡ ಸಭೆಯ ಗಮನಕ್ಕೆ ತಂದರು.

ಆಗ ಮಾತನಾಡಿದ ಸಮಾಜಕಲ್ಯಾಣ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಇಲಾಖೆಯಿಂದ ಪ್ರತಿಯೊಂದು ತಾಲೂಕಿಗೆ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ರೂ 1.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಈ ಅನುದಾನವನ್ನು ಬಳಸಿಕೊಂಡು ಸ್ಥಳೀಯ ಶಾಸಕರ ಗಮನಕ್ಕೆ ತಂದು ಕುಡಿಯುವ ನೀರಿನ ಯೋಜನೆಗಳನ್ನು ಜಾರಿ ಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಮೇವಿನ‌ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿ ಖಾತೆಯಲ್ಲಿ ರೂ 12 ಕೋಟಿ ತೆಗೆದಿರಸಲಾಗಿದೆ.

ಬೋರ್ ವೆಲ್ ಸಚ್ಛಗೊಳಿಸಲು, ಆಳವಾಗಿಸಲು, ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು, ಪ್ರತಿಯೊಂದು ತಹಸೀಲ್ದಾರ ಅವರ ಖಾತೆಯಲ್ಲಿ ಕನಿಷ್ಟ ರೂ 40 ಸಾವಿರ ಹಣ ಜಮೆಯಾಗಿರುವಂತೆ ನೋಡಿಕೊಂಡು ತುರ್ತು ಸಂದರ್ಭದಲ್ಲಿ ಆ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದರು.

ಕುಸನೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ 11000 ಜನರಿರುವ ಗ್ರಾಮಕ್ಕೆ ಕೇವಲ 5 ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ ಅದು ಸಾಕಾಗುತ್ತಿಲ್ಲ ಈ ಕುರಿತು ಕಲಬುರಗಿ ತಹಸೀಲ್ದಾರ ಅವರ ಗಮನಕ್ಕೆ ತರಲಾಗಿದೆ ಆದರೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಶಾಸಕರಾದ ಬಸವರಾದ ಮತ್ತಿಮೂಡ ಅವರು ಸಚಿವರಿಗೆ ದೂರಿದರು.‌

ಶಾಸಕರ ದೂರಿಗೆ ಹಸೀಲ್ದಾರ ಅವರು ತಪ್ಪು ಮಾಹಿತಿ ಕೊಡಲು ಪ್ರಯತ್ನಿಸಿದಾಗ ” ನಿಮಗೆ ಸರಿಯಾದ ಮಾಹಿತಿಯೇ ಇಲ್ಲ. ತಹಸೀಲ್ದಾರಗೆ ಮಾಹಿತಿ ಇಲ್ಲ ಎಂದ ಮೇಲೆ ದನ ಕಾಯಲು ಹೋಗಿ ” ಎಂದು ಹರಿಹಾಯ್ದರು.

ಮುಂದಿನ 24 ಗಂಟೆಯಲ್ಲಿ ಸಮರ್ಪಕ ಕುಡಿಯುವ ನೀರು ಒದಗಿಸಿ ಆ ಕುರಿತು ಶಾಸಕರಿಗೆ ಉಸ್ತುವಾರಿ ಸಚಿವರಿಗೆ ಹಾಗೂ ನನಗೆ ಮಾಹಿತಿ‌‌ ನೀಡಬೇಕು ಎಂದು ಖಡಕ್ ಆದೇಶ ನೀಡಿದರು.

ಜಿಲ್ಲೆಯಲ್ಲಿ ಬಾಕಿಯಿರುವ ಸಾಗುವಳಿ, ಹಕ್ಕುಪತ್ರ ಸೇರಿದಂತೆ ಹಂಚಿಕೆಯಾಗದ ಕಂದಾಯ ದಾಖಲಾತಿಗಳ ವಿವರವನ್ನು ಪರಿಶೀಲಿಸಿದ ಕಂದಾಯ ಸಚಿವರು ಹದಿನೈದು ದಿನಗಳಲ್ಲಿ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು. ಕೂಡಲೇ ಮಧ್ಯೆ ಪ್ರವೇಶಿಸಿದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪ್ರತಿ ತಾಲೂಕಿನಲ್ಲಿ ಎರಡು ದಿನ‌ ಇದ್ದು ಬಾಕಿಯಿರುವ ಕಂದಾಯ ದಾಖಲಾತಿಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು

ಕಂದಾಯ ಇಲಾಖೆಯಲ್ಲಿ ಈಗ ಎಲ್ಲವೂ ಆನ್ ಲೈನ್ ಮಾಡಲಾಗಿದೆ ತಂತ್ರಜ್ಞಾನ ಬಳಸಿಕೊಂಡು‌ ಜನರಿಗೆ ಅನುಕೂಲವಾಗಲು ಸಾಕಷ್ಟು ಸುಧಾರಣೆ ತರಲಾಗಿದೆ.

ಜನರ ಹಾಗೂ ಅಧಿಕಾರಿಗಳ ನಡುವೆ ಯಾವುದೇ ಲಿಂಕ್ ಇಲ್ಲದಂತೆ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡದೇ ಅರ್ಹ ಫಲಾನುಭವಿಗಳಿಗೆ ನೇರವಾಗಿ ಎಲ್ಲ ಸೌಲಭ್ಯ ತಲುಪಬೇಕು ಎನ್ನುವ ಉದ್ದೇಶದಿಂದ ಆನ್ ಲೈನ್ ಮಾಡಲಾಗಿದೆ.

ಆದರೆ, ಅಧಿಕಾರಿಗಳು ಸಹಕರಿಸಿ ನಮ್ಮ ಸುಧಾರಣೆಗೆ ಸಹಕರಿಸುತ್ತಿಲ್ಲ. ಇದನ್ನು ಸಹಿಸಲಾಗದು 30 ದಿನದ ಕಾಲಾವಕಾಶ ನೀಡುತ್ತೇನೆ ಸುಧಾರಣೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು‌.

ಕಲಬುರಗಿ ಗ್ರಾಮೀಣ ವ್ಯಾಪ್ತಿಯಲ್ಲಿ‌ರುವ ಸರಕಾರದ ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಅಗಷ್ಟ್ 14 ರ ಒಳಗಾಗಿ ಎಲ್ಲ ಒತ್ತುವರಿ ಆಸ್ತಿಗಳನ್ನು ವಶಪಡಿಸಿಕೊಂಡು ಅಂತಹ ಜಾಗಗಳಿಗೆ ತಂತಿ ಬೇಲಿ ಹಾಕಿ ಸಂಬಂಧಿಸಿದ‌ ಇಲಾಖೆಯ ಬೋರ್ಡು ನೇತಾಕಿ ಎಂದ ಸಚಿವರು, ಹಾಗೆ ವಶಡೆದುಕೊಂಡ ಆಸ್ತಿ ವಿವರದ ಮಾಹಿತಿಯನ್ನು ನನಗೆ,ಉಸ್ತುವಾರಿ ಸಚಿವರಿಗೆ, ಆರ್.ಸಿಗೆ ಹಾಗೂ ಜಿಲ್ಲಾಧಿಕಾರಿಗೆ ಮಾಹಿತಿ‌ ಕೊಡಬೇಕು ಎಂದರು.

ಪೋಡಿ ಮುಕ್ತ ಜಮೀನು ಮಾಡಲು ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸರಕಾರಿ ಸರ್ವೇಯರ್ ಜತೆಗೆ ನೋಂದಣಿ‌ ಹೊಂದಿರುವ ಖಾಸಗಿ ಸರ್ವೇಯರ್ ಅವರನ್ನು ನೇಮಿಸಿಕೊಂಡು ಜಮೀನುಗಳ ಸರ್ವೆ ಮಾಡಬೇಕು ಎಂದು ಸಚಿವ ದೇಶಪಾಂಡೆ ಅವರು ಸರ್ವೇ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Related Articles

Leave a Reply

Your email address will not be published. Required fields are marked *

Back to top button