Homeಮಹಿಳಾ ವಾಣಿ
ಎಂದಾದರೂ ಅವಲಕ್ಕಿ ಪುಳಿಯೋಗರೆ ಟ್ರೈ ಮಾಡಿದ್ದೀರಾ?

ಬೇಕಾಗುವ ಪದಾರ್ಥಗಳು…
- ಅವಲಕ್ಕಿ – 1/2 ಕೆಜಿ
- ಪುಳಿಯೋಗರೆ ಪುಡಿ ಅಥವಾ ಗೊಜ್ಜು- ಸ್ವಲ್ಪ
- ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು
- ಉಪ್ಪು-ರುಚಿಗೆ ತಕ್ಕಷ್ಟು
- ಕರಿಬೇವು- ಸ್ವಲ್ಪ
- ಕಡಲೆಕಾಯಿ ಬೀಜ- ಸ್ವಲ್ಪ
- ಅರಿಶಿಣ- ಸ್ವಲ್ಪ
- ಕಡಲೆಬೇಳೆ, ಉದ್ದಿನ ಬೇಳೆ-ಸ್ವಲ್ಪ
- ಸಾಸಿವೆ-ಸ್ವಲ್ಪ
- ಹುಣಸೆಹಣ್ಣಿನ ರಸ- ಸ್ವಲ್ಪ
- ಬೆಲ್ಲ-ಸ್ವಲ್ಪ
- ಒಣಕೊಬ್ಬರಿ (ತುರಿದದ್ದು)- ಸ್ವಲ್ಪ
ಮಾಡುವ ವಿಧಾನ…
- ಅವಲಕ್ಕಿಯನ್ನು ತೊಳೆದು ಸ್ವಲ್ಪ ಹೊತ್ತು ನೆನೆಯಲು ಬಿಡಿ. ಬಾಣೆಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸ್ವಲ್ಪ ಸಾಸಿವೆ, ಕಡಲೆಕಾಯಿ ಬೀಜ, ಕಡಲೆಬೇಳೆ, ಉದ್ದಿನ ಬೇಳೆ ಕರಿಬೇವಿನಸೊಪ್ಪು ಹಾಗೂ ಅರಿಶಿಣ ಹಾಕಿ ಬಾಡಿಸಿ.
- ಇದಕ್ಕೆ ಪುಳಿಯೋಗರೆ ಪುಡಿ ಅಥವಾ ಗೊಜ್ಜು, ಬೆಲ್ಲ ಹಾಗೂ ಹುಣಸೆಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ ಬಾಡಿಸಿ. ಬಳಿಕ ಇದಕ್ಕೆ ಮೊದಲೆ ನೆನೆಸಿಟ್ಟುಕೊಂಡ ಅವಲಕ್ಕಿ ಹಾಗೂ ಕೊಬ್ಬರಿ ತುರಿಯನ್ನು ಹಾಕಿ ಚೆನ್ನಾಗಿ ಬಾಡಿಸಿ ಸಣ್ಣ ಉರಿಯಲ್ಲಿ ಬೇಯಿಸಿರಿ. ಬೇಕಾದರೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಬಹುದು.