ಹಿಂದೂ ಸಂಘಟನೆ ಮುಖಂಡರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆಃ ಆಸ್ಪತ್ರೆಗೆ ಶ್ರೀರಾಮುಲು ಭೇಟಿ
ಕೆರೂರನಲ್ಲಿ ನಿಷೇಧಾಜ್ಞೆ ಜಾರಿ, ಶನಿವಾರ ಬಾದಾಮಿ ಬಂದ್
ಹಿಂದೂ ಸಂಘಟನೆ ಮುಖಂಡರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆಃ ಆಸ್ಪತ್ರೆಗೆ ಶ್ರೀರಾಮುಲು ಭೇಟಿ
ನಾಳೆ ಬಾದಾಮಿ ಬಂದ್‌ಃ ಹಲ್ಲೆಗೊಳಗಾದ ಪ್ರತಿಯೊಬ್ಬರಿಗೆ 50 ಸಾವಿರ ರೂ.ಚಕ್ ವಿತರಣೆ
ಬಾದಾಮಿಃ ತಾಲೂಕಿನ ಕೆರೂರಿನ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಿಮನಿ, ಯಮನೂರ್ ಚುಂಗಿನ್, ಗೋಪಾಲ ದಾಸಮಣಿ ಅವರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದ್ದು, ನಾಳೆ ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳಿಂದ ಬಾದಾಮಿ ಬಂದ್‌ಗೆ ಕರೆ ನೀಡಲಾಗಿದ್ದು, ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಬಂದ್ ಆಚರಿಸಲಾಗುತ್ತಿದೆ.
ಘಟನೆ ವಿಷಯ ತಿಳಿದು ಹಲ್ಲೆಗೊಳಗಾಗಿ ಬಾಗಲ್ ಕೋಟ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದೂಪರ ಸಂಘಟನೆಯ ಮುಖಂಡರನ್ನು ಸಚಿವ ಶ್ರೀರಾಮುಲು ಭೇಟಿಮಾಡಿ ಆರೋಗ್ಯ ವಿಚಾರಿಸಿದರು.
ಅಲ್ಲದೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದರು. ಇದೇ ವೇಳೆ ಹಲ್ಲೆಗೊಳಗಾದ ಪ್ರತಿ ಕಾರ್ಯಕರ್ತರಿಗೆ 50,000 ರೂ.ಗಳ ಚಕ್ ವಿತರಿಸಲಾಯಿತು. ಈ ಕುರಿತು ಶ್ರೀರಾಮುಲು ಅವರು ಫೋಟೊಗಳನ್ನು ಟ್ವಿಟರ್ ಖಾತೆ ಮೂಲಕ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.