ಪ್ರಮುಖ ಸುದ್ದಿ
BREAKING NEWS- ವಿಷ ಕುಡಿಸಿ ಬಾಲಕಿ ಹತ್ಯೆ, ಮುಸುಕುಧಾರಿ ಇಬ್ಬರಿಂದ ಕೃತ್ಯ.?
BREAKING NEWS- ವಿಷ ಕುಡಿಸಿ ಬಾಲಕಿ ಪಾಯಲ್ ಹತ್ಯೆ
ಕಲ್ಬುರ್ಗಿಃ ಬಾಲಕಿಯೋರ್ವಳು ಕಟ್ಟಿಗೆ ತರಲು ತೆರಳಿದ್ದಾಗ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹಿಂದೆ ಬಂದಿದ್ದ ಇಬ್ಬರು ಯುವಕರು ಬಾಲಕಿಗೆ ವಿಷ ಕುಡಿಸಿ ಹತ್ಯೆಗೈದ ಘಟನೆ ತಾಲೂಕಿನ ಪಾಣೆಗಾಂವ ಗ್ರಾಮದಲ್ಲಿ ನಡೆದಿದೆ.
ಬಾಲಕಿಗೆ ಬಲವಂತವಾಗಿ ವಿಷಪ್ರಾಷಣ ಮಾಡಿ ಕೊಲ್ಲಲಾಗಿದೆ ಎಂದು ಗ್ರಾಮಸ್ಥರಿಂದ ತಿಳಿದು ಬಂದಿದ್ದು, ಅನುಮಾನಿತ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಅಲ ಬೀಸಿದ್ದಾರೆ.
ಪಾಯಲ್ ಎಂಬ ಬಾಲಕಿಯೇ ವಿಷ ಸೇವಿಸಿರುವ ಕಾರಣ ಅಸ್ವಸ್ಥಗೊಂಡಿರುವದು ಕಂಡು ಕಲ್ಬುರ್ಗಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಳೆ. ಘಟನೆಗಡ ಹಳೇ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು, ಪೊಲೀಸ್ ತನಿಖೆ ನಂತರವೇ ಸತ್ಯಾಂಶ ಹೊರ ಬೀಳಲಿದೆ.