ಪ್ರಮುಖ ಸುದ್ದಿ
ಬಾದಾಮಿಯಲ್ಲಿ ಸಿದ್ರಾಮಯ್ಯ ಗೆಲ್ಲಲು JDS ಕಾರಣ – HDK
ಬಾದಾಮಿಯಲ್ಲಿ ಸಿದ್ರಾಮಯ್ಯ ಗೆಲ್ಲಲು JDS ಕಾರಣ – HDK
ಬೆಂಗಳೂರಃ ಬಾದಾಮಿಯಲ್ಲಿ ಸಿದ್ರಾಮಯ್ಯ ಗೆಲ್ಲಕು ಜೆಡಿಎಸ್ ಕಾರಣ ಇಲ್ಲವಾದಲ್ಲಿ ಸಿದ್ರಾಮಯ್ಯ 30 ಸಾವಿರ ಮತಗಳ ಅಂತರದಿಂದ ಸೋಲುತ್ತಿದ್ದರು ಎಂದು ಜೆಡಿಎಸ್ ರಾಜ್ಯಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕುಟುಕಿದರು.
ಶನಿವಾರ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಸಿದ್ರಾಮಯ್ಯ ಗೆಲುವು ಸಾಧಿಸಲು ಬಾದಾಮಿಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಹಾಕಿರುವದರಿಂದಲೇ ಗೆಲ್ಲಲು ಕಾರಣವಾಯಿತು,
ಅಲ್ಲದೆ ಆ ಸಂದರ್ಭ ಜೆಡಿಎಸ್ ಕಾಂಗ್ರೆಸ್ ನ ‘ಬಿ’ ಟೀಮ್ ಎಂದು ಎಲ್ಲಡೆ ಅಪಪ್ರಚಾರ ಮಾಡಲಾಯಿತು. ಹೀಗಾಗಿ ಸಿದ್ರಾಮಯ್ಯ ಅಲ್ಪಮತಗಳಿಂದ ಗೆದ್ದರು. ಇಲ್ಲವಾದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಂತೆ ಬಾದಾಮಿಯಲ್ಲೂ ಸೋಲುತಿದ್ದರು ಎಂದು ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದರು.