“ನಮ್ಮ ರೈತರ ಬಾಳು” ಬಡಿಗೇರ ರಚಿತ ಕಾವ್ಯ
ನಮ್ಮ ರೈತರ ಬಾಳು
ಹಳ್ಳ-ಕೊಳ್ಳ ಬತ್ತಿ ಬೆಳೆ ಕಾಣದಾಗಿದ್ದವು
ಆದರೂ ಕಾಯುತಿದ್ದ ರೈತ ನಾಳೆಗಾಗಿ
ಮಳೆಯು ಬಂತು ಹಳ್ಳವು ತುಂಬಿತು
ನಿಂತಲ್ಲೇ ಬೆಳೆಯು ಕೊಳೆತು ಹೋಯಿತು
ಆದರೂ ಕಾಯುತ್ತಿಯನು ರೈತ ನಾಳೆಗಾಗಿ!
ಅಷ್ಟಿಷ್ಟು ಬೆಳೆ ಬೆಳೆದರೆ
ಬೆಂಬಲ ಬೆಲೆಯಾದರೂ ಸಿಗುತಿತ್ತು
ಬೆಳೆಯೇ ಇಲ್ಲದೆ ಬೆಲೆಯ ಬೇಡಿಕೆಯಿಡುವುದ್ಹೇಗೆ?
ಕಾಯುತ್ತಿಯನು ನಮ್ಮ ರೈತ ನಾಳೆಗಾಗಿ!
ಸರಕಾರದ ಪರಿಹಾರ ಇನ್ಯಾರ ಪಾಲೊ
ಮಳೆ ಬಂದರೂ, ಬಾರದಿದ್ದರೂ ಒಂದಾಣೆ ಸಿಗುವುದು ದುಸ್ತರ.., ತಿಂದವರ ಹೊಟ್ಟೆ ತಣ್ಣಗಿರಲೆಂದೂ
ಕಾಯುತ್ತಿಯನು ರೈತ ನಾಳೆಗಾಗಿ!
ನಮ್ಮ ರೈತನ ನಂಬಿಕೆ ಭೂತಾಯಿಯ ಮೇಲೆ
ಇಂದಲ್ಲ ನಾಳೆ ಬೆಳೆತಾಳೆ ಅನ್ನೋ ಭರವಸೆ ಹೊತ್ತು
ಮನದೊಳಗೆ ನೂರೆಂಟು ನೋವು ಮುಚ್ಚಿಟ್ಟು
ಕಾಯುತ್ತಿಯನು ರೈತ ನಾಳೆಗಾಗಿ!
ಅದೆಷ್ಟೋ ನಾಳೆಗಳು ಹೀಗೆ ಉರಿದು ಹೋದವು
ಕಂಡ ಕನಸುಗಳೆಲ್ಲಾ ಕಣ್ಣಂಚಿನಲ್ಲೇ ಕರಗಿದವು
ರೈತರ ಬಾಳು ಬೆಳಗಲುಯಿಲ್ಲ ಬದಲಾಗಲುಯಿಲ್ಲ
ಆದರೂ ಕಾಯುತ್ತಿಯನು ರೈತ ಇನ್ನೊಂದು ನಾಳೆಗಾಗಿ!
–ಗುತ್ತಪ್ಪ ಬಿ. ಬಡಿಗೇರ
ಆಂಗ್ಲ ಭಾಷಾ ಶಿಕ್ಷಕರು.
ಸ.ಹಿ.ಪ್ರಾ.ಶಾಲೆ ಕೊಳ್ಳುರ ಎಂ.
ತಾ.ಶಹಾಪುರ, 9972348581.