ಪ್ರಮುಖ ಸುದ್ದಿ
ಮೆರವಣಿಗೆ ಕಾಲು ತುಳಿದ ಕಾರಣಕ್ಕೆ ಓರ್ವನ ಕೊಲೆ.!
ಬಾಗಲಕೋಟಃ ಮೆರವಣಿಗೆಯೊಂದರಲ್ಲಿ ಕಾಲು ತುಳಿದ ಎನ್ನುವ ಕಾರಣಕ್ಕೆ 8 ಜನರ ಗುಂಪೊಂದು ಓರ್ವ ವ್ಯಕ್ತಿಯನ್ನು ಕೊಲೆಗೈದ ಘಟನೆ ತಾಲೂಕಿನ ಬೇವೂರ ಗ್ರಾಮದಲ್ಲಿ ನಡದಿದೆ.
ಶಿವಪ್ಪ ಯಮನಪ್ಪ ಪೂಜಾರಿ ಎಂಬಾತನೇ ಕೊಲೆಯಾದ ದುರ್ದೈವಿ. ಸಂಭ್ರಮ ಸಡಗರದಿಂದ ಹೊರಟಿದ್ದ ಮೆರವಣಿಗೆಯೊಂದರಲ್ಲಿ ಈ ದುರ್ಘಟನೆ ನಡೆದಿದೆ. ಬಾಗಲಕೊಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.