ಪ್ರಮುಖ ಸುದ್ದಿ
ಕಲಬುರ್ಗಿಃ ಸರಣಿ ಕಳ್ಳತನ, ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ
ಕಲಬುರ್ಗಿಃ ಸರಣಿ ಕಳ್ಳತನ ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ
ಕಲಬುರ್ಗಿಃ ನಗರದ ರಾಜಾಪುರ ಕಾಲೊನಿಯಲ್ಲಿ ಸೋಮವಾರ ತಡ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಬಡಾವಣೆಯ ಕಿರಾಣಿ ಅಂಗಡಿ, ಫೈನಾನ್ಸ್ ಸೇರಿದಂತೆ ಹತ್ತಕ್ಕೂ ಹೆಚ್ಚು ಅಂಗಡಿಗಳಿಗೆ ನುಗ್ಗಿದ ಕಳ್ಳರ ತಂಡ ಅಧಿಕ ಮೌಲ್ಯದ ವಸ್ತುಗಳ ಸೇರಿದಂತೆ, ದುಡ್ಡು ತೆಗೆದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ತಡ ರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಡಾವಣೆಯ ಹಲವಾರು ಅಂಗಡಿಗಳ ಗೇಟ್ ಮುರಿದು, ಒಳಗಡೆ ನುಗ್ಗಿ, ಅಪಾರ ಪ್ರಮಾಣದ ವಸ್ತುಗಳು ಸೇರಿದಂತೆ ಇತರೆ ಸಾಮಾಗ್ರಿ, ದುಡ್ಡು ತೆಗೆದುಕೊಂಡು ಪಾರಾಗಿದ್ದಾರೆ.
ಕಳ್ಳರ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
Good informarion …