Homeಅಂಕಣಪ್ರಮುಖ ಸುದ್ದಿ

ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗಿದೆ

ಬಾಳೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು, ಕಿಡ್ನಿಯ ಕಲ್ಲಿನ ಸಮಸ್ಯೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಬಾಳೆ ದಿಂಡಿನಿಂದ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯ, ಪಕೋಡ, ದೋಸೆ, ಇಡ್ಲಿ, ಸಲಾಡ್, ಮೊಸರು ಗೊಜ್ಜು ಹೀಗೆ ನಾನಾ ಭಕ್ಷ್ಯ ತಯಾರಿಸಬಹುದು.

ಮಾತ್ರವಲ್ಲ ಬಾಳೆ ನಾರಿನಿಂದ ವಿವಿಧ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸಬಹುದು. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ, ಬಟ್ಟೆ ತಯಾರಿ ಹೀಗೆ…ಏನೆಲ್ಲ ಮಾಡಬಹುದು ಎಂಬ ಸಂಶೋಧನೆ ಮಾಡುವ ತನಕ ಬಾಳೆ ಇಷ್ಟೊಂದು ರೀತಿಯಲ್ಲಿ ಉಪಯೋಗವಿದೆ. ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಅದ್ಭುತ ಶಕ್ತಿ ಬಾಳೆ ದಿಂಡಿಗಿದೆ.

ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗೆ ಇದು ರಾಮಬಾಣ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ. ಕಿಡ್ನಿ ಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡಿನ ನೀರನ್ನು ಕುಡಿಯುವುದು ಅತ್ಯುತ್ತಮ ಮಾರ್ಗ. ಬಾಳೆ ದಿಂಡಿನ ರಸವನ್ನು ನೇರವಾಗಿ ಸೇವಿಸಲು ಸಾಧ್ಯವಾಗದಿದ್ದರೆ ಜ್ಯೂಸ್‌ ತಯಾರಿಸಿಯೂ ಕುಡಿಯಬಹುದು. ಬಾಳೆದಿಂಡಿನ ನೀರಿಗೆ ಜೀರಿಗೆ, ಶುಂಠಿ, ನಿಂಬೆರಸ, ಗಾಂಧಾರಿ ಮೆಣಸು, ಚಿಟಿಕೆ ಉಪ್ಪು, ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು.   Ad

Related Articles

Leave a Reply

Your email address will not be published. Required fields are marked *

Back to top button