ಧಾರಕಾರ ಮಳೆಗೆ ನೆಲಕಚ್ಚಿದ ಭತ್ತದ ಪೈರು
ಧಾರಕಾರ ಮಳೆಗೆ ನೆಲಕಚ್ಚಿದ ಭತ್ತದ ಪೈರು
ಯಾದಗಿರಿ: ಜಿಲ್ಲಾದ್ಯಂತ ಗುರುವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಭತ್ತದ ಫೈರು ನೆಲಕ್ಕಚ್ಚಿದ್ದು ಮತ್ತೆ ಅನ್ನದಾತ ಸಂಕಷ್ಟ ಎದುರಿಸುತಾಗಿದೆ.
ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ, ತಾಲೂಕಿನ ಹಲವು ಹೋಬಳಿಗಳಲ್ಲಿ ಅಧಿಕ ಮಳೆಯಾಗಿರುವ ವರದಿಯಾಗಿದ್ದು, ಭತ್ತದ ಪೈರು ನೆಲಕ್ಕೆ ಉರುಳಿವೆ. ಹೀಗಾಗಿ ಇನ್ನೇನು ಭತ್ತ ಕೈಗೆಟುಕತ್ತದೆ ಎನ್ನುವಷ್ಟರಲ್ಲಿ ಅತ್ಯಧಿಕ ಮಳೆ, ಗಾಳಿಗೆ ಬೆಳೆ ನೆಲಕಚ್ಚಿದೆ. ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರು ಸಾಲ ಸೂಲ ಮಾಡಿ ಅಲ್ಪಸ್ವಲ್ಪ ಭತ್ತ ಬೆಳೆದಿದ್ದರು. ಇನ್ನೇನು ಸ್ವಲ್ಪ ದಿನದಲ್ಲಿ ಭತ್ತ ಕಟಾವು ಮಾಡುವ ಹಂತಕ್ಕೆ ತಲಪಿತ್ತು ಆದರೆ ವರಣನ ಆರ್ಭಟಕ್ಕೆ ಬೆಳೆಗಳು ತತ್ತರಿಸಿ ಹೋಗಿದ್ದು, ರೈತ ಮತ್ತೊಂದು ಸಂಕಷ್ಟದಲ್ಲಿ ಮುಳುಗಿದ್ದಾನೆ.
ಭತ್ತ ಬೆಳೆಸಲು ಸಾಲ ಮಾಡಿ ರಾಸಾಯನಿಕ ಗೊಬ್ಬರ ಔಷಧಿ, ಸೇರಿದಂತೆ ಕೃಷಿ ಚಟುವಟಿಕೆಗಾಗಿ ಸಾಕಷ್ಟು ಹಣ ವೆಚ್ಚ ಮಾಡಿದ್ದಾನೆ ಆದರೆ ಮಳೆಗೆ ಬೆಳೆ ಹಾನಿಯಾಗಿದ್ದು ರೈತನಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಿಮಿಸಿದೆ.
ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು. ಮತ್ತು ಕೃಷಿ ಅಧಿಕಾರಿಗಳು ಹಾನಿಗೊಳಗಾದ ಭತ್ತ ಬೆಳೆದ ರೈತನಿಗೆ ಸೂಕ್ತ ಪರಿಹಾರ ಒದಗಿಸಿ ಕೊಡುವ ಮೂಲಕ ಅನ್ನದಾನತ ಕಣ್ಣೀರು ತಡೆಯಬೇಕಾಗಿದೆ ಎಂಬುವುದು ರೈತರ ಮುಖಂಡರ ಒತ್ತಾಯವಾಗಿದೆ.