ಪ್ರಮುಖ ಸುದ್ದಿ

ಶಹಾಪುರ ಕ್ಷೇತ್ರದಿಂದ 10 ಸಾವಿರ ಕಾರ್ಯಕರ್ತರು -ದರ್ಶನಾಪುರ

ಅ.21 ಭಾರತ ಜೋಡೋ ಯಾತ್ರೆ ರಾಯಚೂರ ಪ್ರವೇಶ

ಭಾರತ ಜೋಡೋ ಯಾತ್ರೆಃ ಪೂರ್ವ ಸಭೆ

ಅ.21 ಭಾರತ ಜೋಡೋ ಯಾತ್ರೆ ರಾಯಚೂರ ಪ್ರವೇಶ

yadgiri, ಶಹಾಪುರಃ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದ್ದು, ಆಡಳಿತಾರೂಢ ಪಕ್ಷದ ಅಸಂವಿಧಾನಿಕ ಆಡಳಿತ ದೋರಣೆಗಳನ್ನು ಖಂಡಿಸಿ ರಾಷ್ಟ್ರದ ಜನಹಿತ ದೃಷ್ಟಿ ಹಿನ್ನೆಲೆ ಭಾರತ ಜೋಡೋ ಯಾತ್ರೆ ಹೊರಟಿದ್ದು, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ, ಇದೇ ಅ.21 ರಂದು ಯಾತ್ರೆ ರಾಯಚೂರ ಪ್ರವೇಶಿಸುವ ಹಿನ್ನೆಲೆ ಶಹಾಪುರ ಮತ ಕ್ಷೇತ್ರದಿಂದ ಸುಮಾರು 10 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ರಾಯಚೂರಿಗೆ ತೆರಳಲಿದ್ದು, ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಸಮೀಪದ ಭೀಮರಾಯನ ಗುಡಿ ಬಲಭೀಮೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಭಾರತ ಜೋಡೋ ಯಾತ್ರಾ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, 150 ದಿನಗಳ ಕಾಲ ಈ ಮಹಾ ಯಾತ್ರೆ ನಡೆಯಲಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಟ್ಟು 3570 ಕಿ.ಮೀ. ನಡಿಗೆಯಾಗಲಿದೆ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿದ್ದು, ಇಂದು ರಾಷ್ಟ್ರದಲ್ಲಿ ಕಾಂಗ್ರೆಸ್ ಪರ ಅಲೆ ಪ್ರಾರಂಭಗೊಂಡಿದೆ. ಯಾತ್ರೆಯುದ್ದಕ್ಕೂ ಲಕ್ಷಾಂತರ ಜನ ಭಾಗಿಯಾಗುತ್ತಿದ್ದು, ಭಾರತ ಜೋಡೋ ಯಾತ್ರೆಯಿಂದ ರಾಷ್ಟ್ರ ಮತ್ತು ರಾಜ್ಯದ ಬಿಜೆಪಿ ವಲಯದಲ್ಲಿ ತಳಮಳ ಶುರುವಾಗಿದೆ.

ಮುಖ್ಯವಾಗಿ ಬಿಜೆಪಿ ಸರ್ಕಾರ ಕೇವಲ 40 ಪರ್ಸೆಂಟ್ ಸರ್ಕಾರವೆಂದು ಬಿಜೆಪಿ ಶಾಸಕರೇ ಮಾತಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಆಂತರಿಕ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದರು. ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೆಸೆಯಬೇಕಿದೆ. ವಾಮಮಾರ್ಗದಿಂದ ಅಧಿಕಾರ ಹಿಡಿದುಕೊಂಡ ಬಿಜೆಪಿ ಆಟ ಇನ್ನೂ ನಡೆಯುವದಿಲ್ಲ. ಮತದಾರರೇ ಅವರಿಗೆ ಪಾಠ ಕಲಿಸಲಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಅರವಿಂದ ಅರಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಣ್ಣ ಉಳ್ಳಂಡಗೇರಿ, ಪ್ರಮುಖರಾದ ಸಿದ್ದನಗೌಡ ಕೆಂಭಾವಿ, ಶರಣಪ್ಪ ಸಲಾದಪುರ, ಹಣಮಂತ್ರಾಯ ದಳಪತಿ, ಬಸನಗೌಡ ಹೊಸಮನಿ, ಸಿದ್ಲಿಂಗಪ್ಪ ಆನೇಗುಂದಿ, ಯಲ್ಲಪ್ಪ ಚಿಪ್ಪಾರ, ಶಿವಮಹಾಂತ ಚಂದಾಪುರ, ಇಬ್ರಾಹಿಂಸಾಬ ಶಿರವಾಳ. ನೀಲಕಂಠ ಬಡಿಗೇರ, ಭೀಮಣ್ಣ ಮೇಟಿ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು.

ನಾಲ್ಕುವರೆ ವರ್ಷದಿಂದ ಮತ ಕ್ಷೇತ್ರದ ಶಾಸಕನಾಗಿ ಜನರ ಆಶೋತ್ತರಗಳಿಗೆ ಸ್ಪಂಧಿಸಿದ ತೃಪ್ತಿ ನನಗಿದೆ. ರಾಜ್ಯದಲ್ಲಿ ವಿರೋಧ ಪಕ್ಷದ ಆಡಳಿತವಾಗಿದ್ದರೂ ಸಹ ಗ್ರಾಮೀಣ, ನಗರ ಭಾಗಕ್ಕೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಶಕ್ತಿ ಮೀರಿ ಶ್ರಮಿಸಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಿ ಜನಹಿತ ಬಯಸಿ ಶ್ರಮಿಸುತ್ತಿದ್ದೇವೆ.

-ಶರಣಬಸಪ್ಪಗೌಡ ದರ್ಶನಾಪುರ. ಶಾಸಕರು.

Related Articles

Leave a Reply

Your email address will not be published. Required fields are marked *

Back to top button