ಪ್ರಮುಖ ಸುದ್ದಿ

ಮಾಧ್ಯಮದವರನ್ನು ತೆಗಳೋದೆ ಕುಮಾರಸ್ವಾಮಿ ಕೆಲಸ-ರಾಜೂಗೌಡ

ಮೈತ್ರಿ ಸರ್ಕಾದ ಚರ್ಮ ತುಂಬಾ ದಪ್ಪ-ರಾಜೂಗೌಡ ವಿಡಂಬನೆ

ಯಾದಗಿರಿಃ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಚರ್ಮ ತುಂಬಾ ದಪ್ಪವಾಗಿದೆ. ಎಂತಹ ಮೊನಚಾದ ಅಸ್ತ್ರದಿಂದ ಚುಚ್ಚಿದರೂ ಪ್ರಯೋಜನವಾಗುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ವಿರೋಧ ಪಕ್ಷ ಮತ್ತು ಮಾಧ್ಯಮದವರನ್ನು ತೆಗಳೋದೆ ಕೆಲಸವಾಗಿದೆ ಎಂದು ಮಾಜಿ ಸಚಿವ, ಶಾಸಕ ಬಿಜೆಪಿ ಎಸ್.ಸಿ.ಎಸ್.ಟಿ. ಘಟಕದ ರಾಜ್ಯಧ್ಯಕ್ಷ ರಾಜೂಗೌಡ ಕಿಡಿಕಾರಿದ್ದಾರೆ.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದ ಅಭೀವೃದ್ಧಿ ಚಿಂತನೆ ಮಾಡಿ ಸಮಗ್ರ ಕೆಲಸ ಮಾಡುವದನ್ನು ಬಿಟ್ಟು ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ರೈತಾಪಿ ಜನ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಉಕ ಭಾಗದ ಜನರ ಸ್ಥಿತಿ ಮಳೆ ಬೆಳೆ ಇಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಇಂತಹ ಸ್ಥಿತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕದ ಬಗ್ಗೆ ಅಸಡ್ಡೆ ಮಾತನಾಡುತ್ತಿದ್ದಾರೆ. ಅವರಿಗೆ ರಾಜ್ಯದ ಸಮಗ್ರ ಅಭಿವೃದ್ಧಿ ಬೇಕಿಲ್ಲ. ಕೇವಲ ಮಂಡ್ಯ, ಹಾಸ ಮೈಸೂರ ಭಾಗಕಷ್ಟೆ ಸಿಎಂ ಆಗಿದ್ದಾರೆ ಕಾಣುತ್ತದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಗೌರವ ಸ್ಥಾನದಲ್ಲಿದ್ದು, ಬರಿ ವಿರೋಧ ಪಕ್ಷದ ಮುಖಂಡರ ಮೇಲೆ ಮನಬಂದಂತೆ ಹೇಳಿಕೆ ನೀಡಿದರೆ ಅಭಿವೃದ್ಧಿ ಚಿಂತನೆ ಮಾಡುವವರಾರು..ಕೆಲಸ ಮಾಡುವವರಾರು ನಿಮ್ಮಿಂದ ಜವಬ್ದಾರಿ ನಿಭಾಯಿಸಲು ಆಗುತ್ತಿಲ್ಲವೇ.? ಹಾಗಿದ್ದರೆ ಕೆಳಗಿಳಿಯಿರಿ ಕುರ್ಚಿಯಿಂದ, ನಮ್ಮ ಪಕ್ಷದ ಹುಲಿ (ಬಿಎಸ್.ವೈ) ಮುಖ್ಯಮಂತ್ರಿಯಾಗುತ್ತಾರೆ..ರಾಜ್ಯದ ಜನರ ಸಮಸ್ಯೆ ಆಲಿಸುವ ಮೂಲಕ ಸುಕ್ತ ಪರಿಹಾರ ಒದಗಿಸಲಿದ್ದಾರೆ.

ಮೈತ್ರಿ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಉಕ ಭಾಗದ ಅಭಿವೃದ್ಧಿ ಬಗ್ಗೆ ಕಡೆಗಣಿಸಿದೆ. ಆಡಳಿತ ನಡೆಸಲು ಆಗದಿದ್ದ ಮೇಲೆ ಅಧಿಕಾರ ಬಿಟ್ಟು ತೊಲಗಿ, ರಾಜ್ಯದ ಜನರನ್ನು ಇನ್ನಷಟ್ಟು ಸಂಕಷ್ಟದಲ್ಲಿ ನೂಕಬೇಡಿ. ಶೀಘ್ರದಲ್ಲಿ ನಮ್ಮ ಪಕ್ಷವೇ ಆಡಳಿತಕ್ಕೆ ಬರಲಿದೆ. ಯಡಿಯೂರಪ್ಪನವರು ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಅಲ್ಲದೆ ಭಾಜಪ ಕಾರ್ಯಕರ್ತರು ಎಲ್ಲರೂ ಒಂದಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದೀಜಿ ಕರ್ನಾಟಕದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಭರ್ಜರಿ ಗೆಲುವು ಸಾಧಿಸುವುದು ಖಚಿತವಾಗಿದೆ. ಮತ್ತೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button